Ad Code

Ticker

6/recent/ticker-posts

Click Below Image to Join Our Telegram For Latest Updates

Republic day speech in kannada for school children 26th January 2025/ಶಾಲಾ ಮಕ್ಕಳಿಗೆ ಕನ್ನಡದಲ್ಲಿ ಗಣರಾಜ್ಯೋತ್ಸವದ ಭಾಷಣಗಳು 26 ಜನವರಿ 2025

Republic day speech in kannada for school children 26th January 2025

ಶಾಲಾ ಮಕ್ಕಳಿಗೆ ಕನ್ನಡದಲ್ಲಿ ಗಣರಾಜ್ಯೋತ್ಸವದ  ಭಾಷಣಗಳು 26 ಜನವರಿ 2025

Republic day speech in kannada for school childrens 26th January  2025/ಶಾಲಾ ಮಕ್ಕಳಿಗೆ ಕನ್ನಡದಲ್ಲಿ ಗಣರಾಜ್ಯೋತ್ಸವದ  ಭಾಷಣಗಳು 26 ಜನವರಿ 2025


ಚಾಣಕ್ಯ ಕಣಜ ವೆಬ್ ತಾಣಕ್ಕೆ ತಮಗೆಲ್ಲ ಆತ್ಮೀಯ ಸ್ವಾಗತ........!!

ಶಾಲಾ ಮಕ್ಕಳಿಗೆ ಕನ್ನಡದಲ್ಲಿ ಗಣರಾಜ್ಯೋತ್ಸವದ  ಭಾಷಣಗಳು ಜನವರಿ 2025

ಸಂಕ್ಷಿಪ್ತ ಹಿನ್ನಲೆ : ಗಣರಾಜ್ಯ ದಿನ (Republic Day) 1929ರ ಲಾಹೋರ್ ಕಾಂಗ್ರೆಸ್ ಅಧಿವೇಶನದ (ಅಧ್ಯಕ್ಷತೆ: ಜವಾಹರ್ ಲಾಲ್ ನೆಹರು) ನಿರ್ಧಾರದನ್ವಯ, 1930ರ ಜನವರಿ 26ಅನ್ನು ಪೂರ್ಣ ಸ್ವರಾಜ್ಯ ದಿನವೆಂದು ಆಚರಿಸಲು ನಿರ್ಧರಿಸಲಾಯಿತು. ಅದರ ಜ್ಞಾಪಕಾರ್ಥವಾಗಿ ಜನವರಿ 26 ರಂದು ಭಾರತದ ಸಂವಿಧಾನವನ್ನು ಅಧಿಕೃತವಾಗಿ ಜಾರಿಗೆ ತರಲಾಯಿತು. ಈ ಹಿನ್ನೆಲೆಯಲ್ಲಿ ಜನವರಿ 26 ಅನ್ನು ಭಾರತದಲ್ಲಿ ಗಣತಂತ್ರ ದಿನವನ್ನಾಗಿ ಆಚರಿಸಲಾಗುವುದು. 2025ರ ಜನವರಿ 26 ರಂದು 76ನೇ ಗಣರಾಜ್ಯೋತ್ಸವಕ್ಕೆ  ಮುಖ್ಯ ಅತಿಥಿಗಳಾಗಿ ಭಾಗವಹಿಸುವಂತೆ ಇಂಡೋನೇಷ್ಯಾದ ಅಧ್ಯಕ್ಷ  ಪ್ರಬೋವೊ ಸುಬಿಯಾಂಟೊ ಅವರಿಗೆ ಆಹ್ವಾನ ನೀಡಲಾಗಿದೆ. 

New Update : 76ನೇ ಗಣರಾಜ್ಯೋತ್ಸವದ ಥೀಮ್ : ಸ್ವರ್ಣಿಮ್ ಭಾರತ್: ವಿರಾಸತ್ ಔರ್ ವಿಕಾಸ್ , (Swarnim Bharat: Virasat aur Vikas)

👉2025ರ ಗಣರಾಜ್ಯೋತ್ಸವದ ಮುಖ್ಯ ಅತಿಥಿ : 
ಇಂಡೋನೇಷ್ಯಾದ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರು ಭಾರತದ 2025 ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮುಖ್ಯ ಅತಿಥಿಯಾಗಲು ನವದೆಹಲಿಯ ಆಹ್ವಾನವನ್ನು ಔಪಚಾರಿಕವಾಗಿ ಸ್ವೀಕರಿಸಿದ್ದಾರೆ.

ಗಣರಾಜ್ಯೋತ್ಸವದ ಪುಟ್ಟ ಭಾಷಣ: 01

      ಎಲ್ಲರಿಗೂ ಈ ದಿನದ ಶುಭ ವಂದನೆಗಳು , ವೇದಿಕೆಯಮೇಲೆ ಆಸೀನರಾದ ಎಲ್ಲ ಅತಿಥಿ ಮೊಹೋದಯರಿಗೂ ಹಾಗೂ ನನ್ನ ಗುರುವೃಂದಕ್ಕೂ  76ನೇ ಗಣರಾಜ್ಯೋತ್ಸವದ ಶುಭಾಶಯಗಳು.

    ನಮಗೆಲ್ಲರಿಗೂ ತಿಳಿದಿರುವಂತೆ ಇಂದು ನಾವು 76ನೇ ಗಣರಾಜ್ಯೋತ್ಸವವನ್ನು ಆಚರಿಸಲು ಇಲ್ಲಿ ಸೇರಿದ್ದೇವೆ. ಪ್ರತಿ ವರ್ಷ  ಜನವರಿ 26ರಂದು ಗಣರಾಜ್ಯೋತ್ಸವವನ್ನು  ಆಚರಣೆ ಮಾಡುತ್ತೇವೆ. ಇಂದು ಭಾರತ ಸಂವಿಧಾನ ಜಾರಿಗೆ ಬಂದ ದಿನವಾಗಿದೆ. ನಾನು ಭಾರತ ದೇಶದ ಪ್ರಜೆಯಾಗಿರುವುದಕ್ಕೆ ತುಂಬಾ ಹೆಮ್ಮೆಪಡುತ್ತೇನೆ. ಸಂವಿಧಾನ ಜಾರಿಗೆ ಬಂದ ನಂತರ ಈ ದೇಶದ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳಾದ ಸಮಾನತೆ, ಸ್ವಾತಂತ್ರ್ಯ, ಧರ್ಮ, ಸಂಸ್ಕೃತಿ, ಶಿಕ್ಷಣ ಮತ್ತು ಇತರೆ ಹಕ್ಕುಗಳು ಸಿಕ್ಕಿರುತ್ತವೆ. ಇಂತಹ ಶುಭದಿನ ಮತ್ತು ಐತಿಹಾಸಿಕ ದಿನದಂದು ನಮ್ಮ ದೇಶದ ಸ್ವಾತಂತ್ರ್ಯ ಹಾಗೂ ಸಂವಿಧಾನಕ್ಕಾಗಿ ಶ್ರಮಿಸಿದ ಎಲ್ಲರಿಗೂ ತಲೆ ಬಾಗಿಸಿ ನಮಿಸಬೇಕಿದೆ . ಇಂದು ನಮ್ಮ ದೇಶದ ಬಗ್ಗೆ ಮತ್ತು ಸಂವಿಧಾನದ ಜಾರಿಗೆ ಬಂದ ದಿನದ ಬಗ್ಗೆ ಕೆಲವು ವಿಷಯಗಳನ್ನು ಹಂಚಿಕೊಳ್ಳಲು ತುಂಬಾ ಸಂತೋಷವಾಗುತ್ತಿದ್ದು ಅವಕಾಶ ನೀಡಿರುವುದಕ್ಕೆ ಧನ್ಯವಾದಗಳು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿಗಳ ಆತ್ಮಕ್ಕೆ ಶಾಂತಿ ಕೋರುತ್ತಾ ನನ್ನ ಮಾತುಗಳನ್ನು ಮುಗಿಸುತ್ತಿದ್ದೇನೆ. ಜೈ ಹಿಂದ್ ಜೈ ಭಾರತ ಮಾತೆ 

ಗಣರಾಜ್ಯೋತ್ಸವದ ಪುಟ್ಟ ಭಾಷಣ: 02

       ಎಲ್ಲಾ ನನ್ನ ಸ್ನೇಹಿತರಿಗೆ ಹಾಗೂ ಗುರುವೃಂದರಿಗೆ ಬೆಳಗಿನ ಶುಭೋದಯ.ಇಂದು 76ನೇ ಗಣರಾಜ್ಯೋತ್ಸವದ ಕುರಿತು ಒಂದೆರಡು ಮಾತನಾಡುತ್ತೇನೆ.

      ಭಾರತೀಯ ಸಂವಿಧಾನ ಜಾರಿಗೆ ಬಂದು ಇಂದಿಗೆ 76 ವರ್ಷಗಳಾದವು,  ಭಾರತ ಗಣರಾಜ್ಯವಾದದ್ದು ಜನವರಿ 26 1950ರಂದು. ಇದರ ಪ್ರಯುಕ್ತ ಈ ದಿನವನ್ನು ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ. ಭಾರತದ ಪ್ರಜೆಗಳನ್ನು ಆಳುವ ಶಾಸಕಾಂಗ, ನ್ಯಾಯ ಒದಗಿಸುವ ನ್ಯಾಯಾಂಗ, ಹಾಗೂ ಜನರಿಗೆ ಕೆಲಸ ಮಾಡುವ ಕಾರ್ಯಗಳು  ಹೇಗಿರಬೇಕು? ಯಾವೆಲ್ಲ ನಿಯಮಗಳನ್ನ ಕಟ್ಟಳೆಗಳನ್ನ ಅವರು ಪಾಲಿಸಬೇಕು? ಎಂಬೆಲ್ಲ ಸೂಚನೆಗಳನ್ನ ಹಾಕಿಕೊಟ್ಟ ಸಮಗ್ರ ಮಾಹಿತಿಗಳ ಗುಚ್ಛವೇ ಸಂವಿಧಾನ. ಡಾಕ್ಟರ್ ಬಿ ಆರ್ ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಲ್ಪಟ್ಟ ಈ ಸಂವಿಧಾನ 1950 ಜನವರಿ 26ರಂದು ಭಾರತದಲ್ಲಿ ಸಂವಿಧಾನ ಜಾರಿಗೆ ಬಂದ ಮೇಲೆ ಪ್ರಜೆಗಳದ್ದೇ ಸರಕಾರ  ಅಸ್ತಿತ್ವಕ್ಕೆ ಬಂದಿತು. ಭಾರತೀಯರಾದ ನಾವು ಗಣರಾಜ್ಯೋತ್ಸವದ ಸಂದರ್ಭದಲ್ಲಿ ತಮ್ಮ ತ್ಯಾಗ ಬಲಿದಾನಗಳಿಂದ ದೇಶವನ್ನ ಕಾಪಾಡುವ ಭೂಸೇನೆ, ವಾಯು ಸೇನೆ ಹಾಗೂ ನೌಕಾಸೇನೆಯ ಎಲ್ಲಾ ಸೈನಿಕರಿಗೂ ಹಾಗೂ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಎಲ್ಲಾ ವಿಜ್ಞಾನಿಗಳಿಗೂ, ತಂತ್ರಜ್ಞರಿಗೆ ಮತ್ತು ದೇಶದ ಬೆನ್ನೆಲುಬಾದ ರೈತ ವರ್ಗಕ್ಕೂ ನಾವು ಈ ಸಂದರ್ಭದಲ್ಲಿ ಚಿರಋಣಿಯಾಗಿರುತ್ತಾ ದೇಶದ ಸರ್ವಾಂಗೀಣ  ಅಭಿವೃದ್ಧಿಗೆ ನಮ್ಮ ಸೇವೆ ಸಲ್ಲಿಸೋಣ ಎಂದು ಶಪಥ ಮಾಡೋಣ. ಎಂದು ಹೇಳುತ್ತಾ ನನ್ನ ಮಾತುಗಳನ್ನು ಮುಗಿಸುತ್ತಿದ್ದೇನೆ. ಜೈ ಹಿಂದ್ ಜೈ ಭಾರತ ಮಾತೆ 


ಗಣರಾಜ್ಯೋತ್ಸವದ ಪುಟ್ಟ ಭಾಷಣ: 03

     ಎಲ್ಲರಿಗೂ ನಮಸ್ಕಾರಗಳು, ವೇದಿಕೆ ಮೇಲೆ ಆಸೀನರಾಗಿರುವ ಸನ್ಮಾನ್ಯ ಅತಿಥಿಗಳಿಗೆ ಹಾಗೂ ನನ್ನ ಸ್ನೇಹಿತರಿಗೆ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

    1950ರಲ್ಲಿ ಔಪಚಾರಿಕವಾಗಿ ಅಂಗೀಕರಿಸಲ್ಪಟ್ಟ ಭಾರತದ ಸಂವಿಧಾನವು ಬ್ರಿಟಿಷ್  ವಸಾಹತುಶಾಹಿ ಸರ್ಕಾರದ ಕಾಯಿದೆ 1935ನ್ನು ದೇಶದ ಆಡಳಿತ ಪಠ್ಯವಾಗಿ ಬದಲಾಯಿಸಿತು. ಜನವರಿ 26, 1950 ರಂದು ಭಾರತದ ಸಂವಿಧಾನದ ಪೀಠಿಕೆ, ಸಂವಿಧಾನದ ಪ್ರಮುಖ ತತ್ವಗಳನ್ನು, ಪ್ರಸ್ತುತಪಡಿಸುವ ಹೇಳಿಕೆ ಜಾರಿಗೆ ಬಂದಿತು. ಇದು ಸಾರ್ವಭೌಮ ಗಣರಾಜ್ಯಕ್ಕೆ ದೇಶದ ಪರಿವರ್ತನೆಯನ್ನು ಪೂರ್ಣಗೊಳಿಸಿತು. ಸಂವಿಧಾನವು ಈ ದೇಶದ ಎಲ್ಲಾ ನಾಗರಿಕರು ಅವರ ರಾಜಕೀಯ ನಂಬಿಕೆಗಳನ್ನ ಲೆಕ್ಕಿಸದೆ ಅನುಭವಿಸಬೇಕಾದ ಮೂಲಭೂತ ಹಕ್ಕುಗಳನ್ನು ಸ್ಥಾಪಿಸುತ್ತದೆ. ಇದು ದೇಶದ ಎಲ್ಲಾ ನಾಗರಿಕರು  ಪಾಲಿಸಬೇಕಾದ ಕೆಲವು ಮೂಲಭೂತ ಕರ್ತವ್ಯಗಳನ್ನ ಸಹ ಸ್ಥಾಪಿಸುತ್ತದೆ.ಎಂದು ಹೇಳುತ್ತಾ  76ನೇ ಗಣರಾಜ್ಯೋತ್ಸವದ ಶುಭಾಶಯ ಕೋರುತ್ತಾ ನನ್ನ ಈ ಪುಟ್ಟ ಭಾಷಣಕ್ಕೆ ವಿರಾಮವಿಡುತ್ತೇನೆ. ಜೈ ಹಿಂದ್ ಜೈ ಭಾರತ ಮಾತೆ 



ಗಣರಾಜ್ಯೋತ್ಸವದ ಪುಟ್ಟ ಭಾಷಣ: 04

     ಸನ್ಮಾನ್ಯ ಅಧ್ಯಕ್ಷರೇ ಮುಖ್ಯ ಅತಿಥಿಗಳೇ ಊರಿನ ಗಣ್ಯರೇ ಮುಖ್ಯ ಗುರುಗಳೇ, ಶಿಕ್ಷಕರೇ ಹಾಗೂ ನನ್ನ ಪ್ರೀತಿಯ ಗೆಳೆಯರೇ, ಎಲ್ಲರಿಗೂ ಶುಭೋದಯ ಹಾಗೂ 76ನೆಯ ಗಣರಾಜ್ಯೋತ್ಸವದ ಶುಭಾಶಯಗಳು. 

     ಪ್ರತಿವರ್ಷ ನಾವು ಜನವರಿ 26ರಂದು ಗಣರಾಜ್ಯೋತ್ಸವ ಆಚರಿಸುತ್ತೇವೆ. ಭಾರತದಲ್ಲಿ ಗಣರಾಜ್ಯ ಮತ್ತು ಸಂವಿಧಾನ ಜಾರಿಗೆ ಬಂದ ದಿನವಿದು. ಈ ದಿನವೂ ನಮ್ಮ ದೇಶ ಹೆಮ್ಮೆ ಮತ್ತು ಗೌರವ ಹೆಚ್ಚಿಸುವ ಈ ದಿನವನ್ನು ದೇಶಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಇದನ್ನು ಮೊದಲು 26 ಜನವರಿ 1950 ರಂದು ಆಚರಿಸಲಾಗಿತ್ತು. ಅಂದಿನಿಂದ ಈ ಹಬ್ಬವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. ಈ ದಿನದ ಗೌರವಾರ್ಥವಾಗಿ ಅನೇಕ ಕಾರ್ಯಕ್ರಮಗಳನ್ನು ಸಹ ಆಯೋಜಿಸುತ್ತಾರೆ. ಪ್ರತಿಯೊಂದು ಶಾಲಾ-ಕಾಲೇಜುಗಳಲ್ಲಿ ಕೂಡ ಕಾರ್ಯಕ್ರಮಗಳು ಜರಗುತ್ತವೆ ಎಂದು ಹೇಳುತ್ತಾ ನನ್ನೆರಡು ಮಾತುಗಳಿಗೆ ವಿರಾಮ ನೀಡುತ್ತೇನೆ. ಜೈ ಹಿಂದ್ ಜೈ ಭಾರತ ಮಾತೆ 

ಗಣರಾಜ್ಯೋತ್ಸವದ ಪುಟ್ಟ ಭಾಷಣ: 05

     ವೇದಿಕೆಯ ಮೇಲೆ ಆಸೀನರಾಗಿರುವ ಗಣ್ಯರೇ, ಮುಖ್ಯ ಗುರುಗಳೇ, ಶಿಕ್ಷಕರೇ ಹಾಗೂ ನನ್ನ ಗೆಳೆಯರೆಲ್ಲರಿಗೂ ಶುಭೋದಯ ಹಾಗೂ ಗಣರಾಜ್ಯೋತ್ಸವದ ಶುಭಾಶಯಗಳು.

     ಗಣರಾಜ್ಯೋತ್ಸವದ ಕುರಿತು ಒಂದೆರಡು ಮಾತನಾಡಲು ಬಯಸುತ್ತೇನೆ. ಭಾರತದ ಸಂವಿಧಾನವು 26 ಜನವರಿ 1950 ರಂದು ಜಾರಿಗೆ ಬಂದಿತು. ಸಂವಿಧಾನವು ಭಾರತ ಸರ್ಕಾರದ ಕಾಯಿದೆ 1935 ಅನ್ನು ಭಾರತದ ಆಡಳಿತ ದಾಖಲೆಯಾಗಿ ಬದಲಾಯಿಸಿತು, ಹೀಗಾಗಿ 1947 ರಲ್ಲಿ ಬ್ರಿಟಿಷ್ ರಿಂದ ಸ್ವಾತಂತ್ರ್ಯ ಪಡೆದ ನಂತರ ರಾಷ್ಟ್ರವನ್ನು ಅಧಿಪತ್ಯದಿಂದ ಗಣರಾಜ್ಯವನ್ನಾಗಿ ಪರಿವರ್ತಿಸಿತು. ಸಂವಿಧಾನವನ್ನು ನವೆಂಬರ್ 26 ರಂದು ಭಾರತದ ಸಂವಿಧಾನ ಸಭೆಯು ಅಂಗೀಕರಿಸಿತು. ಭಾರತದಲ್ಲಿ ಸಂವಿಧಾನ ಅಂಗೀಕಾರ ವಾಗಿದ್ದು 1949 ನವೆಂಬರ್ 26 ರಂದೇ ಆದರೂ ಅನುಷ್ಠಾನಕ್ಕೆ  ತಂದಿದ್ದು 1950 ಜನವರಿ 26ರಂದು. ಈ ದಿನವನ್ನು ಗಣರಾಜ್ಯೋತ್ಸವ ದಿನವಾಗಿ ಆಚರಣೆ ಮಾಡಲಾಗುತ್ತದೆ. ಭಾರತ ಸಂವಿಧಾನ ಜನರನ್ನು ಸೂಕ್ಷ್ಮಗೊಳಿಸಿದೆ. ಸರ್ವರಿಗೂ ಸಮಾನತೆ ಒದಗಿಸಿದೆ. ಮೂಲಭೂತ ಹಕ್ಕುಗಳನ್ನ ನೀಡಿದೆ. ಕರ್ತವ್ಯಗಳನ್ನ ನೀಡಿದೆ. ಭಾರತಕ್ಕೆ ಸಂವಿಧಾನವೇ ಬಹುದೊಡ್ಡ ಬಲ. ನಮ್ಮ ಸಂವಿಧಾನ ನಮ್ಮೆಲ್ಲರನ್ನು ರಕ್ಷಿಸುವ ಬಹುದೊಡ್ಡ ಗ್ರಂಥ ಎಂದು ಹೇಳುತ್ತಾ ನನ್ನ ಮಾತುಗಳನ್ನು ಮುಗಿಸುತ್ತೇನೆ. ಜೈ ಹಿಂದ್ ಜೈ ಭಾರತ ಮಾತೆ 




Post a Comment

0 Comments

Important PDF Notes

Ad Code