Ad Code

Ticker

6/recent/ticker-posts

Click Below Image to Join Our Telegram For Latest Updates

[Buddhism] ಬೌದ್ಧ ಧರ್ಮದ 5 ಸಮ್ಮೇಳನಗಳು ಸ್ಪರ್ಧಾತ್ಮಕ ಪರೀಕ್ಷೆಗಾಗಿ ಸಂಕ್ಷಿಪ್ತ ವಿವರ

ಬೌದ್ಧ ಧರ್ಮದ 5 ಸಮ್ಮೇಳನಗಳು 

ಸ್ಪರ್ಧಾತ್ಮಕ ಪರೀಕ್ಷೆಗಾಗಿ ಸಂಕ್ಷಿಪ್ತ ವಿವರ 

[Buddhism] ಬೌದ್ಧ ಧರ್ಮದ 5 ಸಮ್ಮೇಳನಗಳು ಸ್ಪರ್ಧಾತ್ಮಕ ಪರೀಕ್ಷೆಗಾಗಿ ಸಂಕ್ಷಿಪ್ತ ವಿವರ
🔰📚🔰

ಹಾಯ್ ಸ್ಪರ್ಧಾ ಮಿತ್ರರಿಗೆಲ್ಲ ನಮಸ್ಕಾರಗಳು....!! ಚಾಣಕ್ಯ ಕಣಜ ವೆಬ್ ತಾಣಕ್ಕೆ ತಮಗೆಲ್ಲ ಆತ್ಮೀಯ ಸ್ವಾಗತ. 

ಆತ್ಮೀಯ ಸ್ಪರ್ಧಾರ್ಥಿಗಳೇ ನಿಮ್ಮ ಮುಂದೆ SDA,FDA,PDO,UPSC, RRB, KPSC,SSC
ಸಾವಿರಾರು ಹುದ್ದೆಗಳಿವೆ, ಆತ್ಮ ವಿಶ್ವಾಸದಿಂದ ಮುನ್ನಡೆದರೆ ಯಶಸ್ಸು ಸಾಧಿಸಬಹುದು, ಕೀಳರಿಮೆ ಹೊಂದಬೇಡಿ, ಶ್ರದ್ಧೆ, ಶ್ರಮದಿಂದ ಮುನ್ನಡೆದರೆ ಯಶಸ್ಸು ನಿಮ್ಮದಾಗುತ್ತದೆ.

ಇತಿಹಾಸ ಎಂದರೆ ಶ್ರೇಷ್ಠ ವ್ಯಕ್ತಿಗಳ ಆತ್ಮಕಥನವೇ ಇತಿಹಾಸ, ನಾಗರೀಕತೆಗಳ ಏಳು ಬೀಳಿನ ಕಥೆಯೇ ಇತಿಹಾಸ, ಅನಾಗರೀಕತೆಯಿಂದ ನಾಗರೀಕತೆಯತ್ತ ಸಾಗಿ ಬಂದ ಮನುಕುಲದ ಕಥೆಯೇ ಇತಿಹಾಸ. ಇತಿಹಾಸ ಮಾನವನನ್ನು ಸುಸಂಸ್ಕೃತನಾಗಿ ಮಾಡುತ್ತದೆ - ಧಾರ್ಮಿಕ ಸಹಿಷ್ಣುತೆಯನ್ನು ಬೋದಿಸುತ್ತದೆ - ಪ್ರಜಾಪ್ರಭುತ್ವ ಪ್ರಜ್ಞೆ ಮೂಡಿಸುತ್ತದೆ, ಮಾನವೀಯ ಮೌಲ್ಯಗಳ ಆಗರ -ಜಗತ್ ಶಾಂತಿಗೆ ಪ್ರೇರಕ - ಬೌದ್ದಿಕ ಭಂಡಾರ - ಭವಿಷತ್ತಿಗೆ ಕೈಮರ - ಬೌದ್ಧಿಕ ವಿಶಾಲಾರ್ಧತೆಗೆ ಅಗತ್ಯ - ವೃತ್ತಿಪರ ಉಪಯೋಗಗಳು - ರಾಷ್ಟ್ರ ಭಕ್ತಿ ಮೂಡಿಸುತ್ತದೆ - ಎಲ್ಲಾ ಸಾಮಾಜಿಕ ವಿಜ್ಞಾನಗಳ ಬೇಕು ಸೂರಿಯ ಮೂಲವಾಗಿದೆ- ಆತ್ಮಜ್ಞಾನಮೂಡಿಸುತ್ತದೆ.ಹಾಗಾಗಿ ಇತಿಹಾಸವನ್ನು ತಿಳಿಯುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಕೂಡ. ಸ್ನೇಹಿತರೇ ಸಾಕಷ್ಟು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಬೌದ್ಧ ಧರ್ಮದ ಸಮ್ಮೇಳನಗಳ ಮೇಲೆ ಪ್ರಶ್ನೆಗಳು ಬಂದಿವೆ. ಹಾಗಾಗಿ ಚಾಣಕ್ಯ ಕಣಜ ನೀಡುತ್ತಿರುವ ಬೌದ್ಧ ಧರ್ಮದ ಸಮ್ಮೇಳನಗಳ ಸಂಕ್ಷಿಪ್ತ ನೋಟ್ಸ್ ನ್ನು ನೋಟ್ ಮಾಡಿಕೊಳ್ಳಿ.ನಿರಂತರ ಅಧ್ಯಯನ ನಿರತರಾಗಿ.ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಂಕನ್ನ ನಿಮ್ಮದಾಗಿಸಿಕೊಳ್ಳಿ. 

ಚಾಣಕ್ಯ ಕಣಜ ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ.ಅಲ್ಲದೆ ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿರುವ ಉಚಿತ ಪಿಡಿಎಫ್ ನೋಟ್ಸ್ ಗಳನ್ನೂ ನಿಮ್ಮ ಅಧ್ಯಯನಕ್ಕೆ ಬಳಸಿಕೊಳ್ಳಿ. ಫೇಸ್‌ಬುಕ್‌ ನಲ್ಲಿ ಪಿಡಿಎಫ್ ಹಂಚಿಕೊಳ್ಳಲು ಸಾಧ್ಯವಾಗದಿರುವುದು ಮತ್ತು ವಾಟ್ಸಾಪ್ & ಟೆಲಿಗ್ರಾಮ್ ನಂತಹ ಆ್ಯಪ್ ಗಳಲ್ಲಿ ಪಿಡಿಎಫ್ ಹಂಚಿಕೊಳ್ಳುವುದರಿಂದ ಫೋನ್ ಸ್ಟೋರೇಜ್ ನಲ್ಲಿ ತೊಂದರೆಗಳು ಎದುರಾಗುವವು ಎಂಬ ಕಾರಣಕ್ಕೇನೇ ವೆಬ್ಸೈಟ್ ನಲ್ಲಿ ಅಪ್ಲೋಡ್ ಮಾಡಲಾಗಿದೆ. 

ವೆಬ್‌ಸೈಟ್ ನಲ್ಲಿ ಪಿಡಿಎಫ್ ನೋಟ್ಸ್ ಗಳನ್ನು ಹಾಕುವ ಇನ್ನೊಂದು ಮಹತ್ವದ ಉದ್ದೇಶ ಏನೆಂದರೆ ಇದು ಅಸಂಖ್ಯಾತ ಜನರಿಗೆ ತಲುಪ ಬಲ್ಲದು ಎಂಬುದೇ ಆಗಿದೆ. ಆದರೆ ವಾಟ್ಸಾಪ್ ನಲ್ಲಿ ಸಮೂಹದ ಸದಸ್ಯರಿಗೆ ಮಿತಿ ಇದೆ. ಆದ್ದರಿಂದ ಜ್ಞಾನ ಒಬ್ಬರ ಸ್ವತ್ತಾಗದೇ ಸರ್ವರ ಸ್ವತ್ತಾಗಲಿ ಎಂಬ ಉದ್ದೇಶದಿಂದಲೇ ವೆಬ್‌ಸೈಟ್‌ ನಲ್ಲಿ ಅಪ್ಲೋಡ್ ಮಾಡಲಾಗಿದೆ. ಈ ಎಲ್ಲ ಪ್ರಯತ್ನದ ಹಿಂದೆ ಒಂದು ಉದ್ದೇಶ ಇದೆ. ಅದು ನಿಮ್ಮ ಯಶಸ್ಸು, ನಿಮಗೊಂದು ಉದ್ಯೋಗ ಸಿಗಲಿ, ನಿಮ್ಮ ಕುಟುಂಬವೂ ಸಹ ಉತ್ತಮವಾಗಿ ಬೆಳಯಲಿ ಎಂಬ ಮಹದಾಸೆ ನಿಮ್ಮ ಚಾಣಕ್ಯ ಕಣಜ ಟೀಮ್ ದು.

🔰📚🔰

ಬೌದ್ಧ ಧರ್ಮದ 5 ಸಮ್ಮೇಳನಗಳು 

ಬೌದ್ಧ ಸಮ್ಮೇಳನಗಳು (Buddhist Conferences)
ಐದು ಬೌದ್ಧ ಸಮ್ಮೇಳನಗಳು ಬೌದ್ದಧರ್ಮದ ಜನಪ್ರಿಯತೆಗೆ ಕಾರಣವಾದವು. ಅವುಗಳೆಂದರೆ-


1) ರಾಜಗೃಹ : 1ನೇ ಬೌದ್ಧ ಸಮ್ಮೇಳನವು ಕ್ರಿ.ಪೂ. 487ರಲ್ಲಿ ರಾಜಗೃಹದಲ್ಲಿ ಅಜಾತಶತೃ ಮಹಾಕಶ್ಯಪನ ಅಧ್ಯಕ್ಷತೆಯಲ್ಲಿ ನಡೆಸಿದನು. ಇಲ್ಲಿ ಬುದ್ಧನ ತತ್ವಗಳನ್ನು ಕಲೆಹಾಕಿ ತ್ರಿಪಿಟಕಗಳನ್ನು ರಚಿಸಲಾಯಿತು.


2) ವೈಶಾಲಿ : 2ನೇ ಬೌದ್ಧ ಸಮ್ಮೇಳನವು ಕ್ರಿ.ಪೂ. 387 ರಲ್ಲಿ ಕಾಕವರ್ಮನ ಪೋಷಣೆಯಲ್ಲಿ ನಡೆದು ಅದು ಬೌದ್ಧ ಭಿಕ್ಷುಗಳ ನಡುವಿನ ಅಂತರವನ್ನು ತೊಡೆದು ಹಾಕಿತು. ಇದರ ಅಧ್ಯಕ್ಷ
ಸಭಾಕಾಮಿ. ಇಲ್ಲಿ ಬೌದ್ದರಲ್ಲಿ ಮಹಾಸಾಂಘಿಕರು ಮತ್ತು ಸ್ಥವೀರವಾದಿಗಳು ಹುಟ್ಟಿಕೊಂಡರು.


3) ಪಾಟಲಿಪುತ್ರ : 3ನೇ ಬೌದ್ಧ ಸಮ್ಮೇಳನ ಕ್ರಿ.ಪೂ. 251ರಲ್ಲಿ ಅಶೋಕನು ಮುಗ್ಗಲಿಪುತ್ರನ ಅಧ್ಯಕ್ಷತೆಯಲ್ಲಿ ಪಾಟಲೀ ಪುತ್ರದಲ್ಲಿ ನಡೆಸಿದನು. ಇದು ಅಭಿದಮ್ಮಪಿಟಕ(ಕಥಾವಸ್ತುವನ್ನುರಚಿಸಿತು). ಇದು ಭಿಕ್ಷುಗಳ ನಡುವೆ ಏಕತೆ ತರಲೆತ್ನಿಸಿತು.


4) ಕುಂಡಲವನ : 4ನೇ ಬೌದ್ಧ ಸಮ್ಮೇಳನವನ್ನು ಕಾನಿಷ್ಕನು ಕಾಶ್ಮೀರದ ಕುಂಡಲವನದಲ್ಲಿ ಸಾ.ಶ. 100 ರಲ್ಲಿ ವಸುಮಿತ್ರನ ಅಧ್ಯಕ್ಷತೆಯಲ್ಲಿ ಏರ್ಪಡಿಸಿದನು. ಇಲ್ಲಿ ತ್ರಿಪಿಟಕಗಳ ಮೇಲೆ ಮಹಾವಿಭಾಷ್ಯಗಳನ್ನು ರಚಿಸಲಾಯಿತು. ಇಲ್ಲಿ ಬೌದ್ಧ ಧರ್ಮ ಹೀನಯಾನ ಮತ್ತು ಮಹಾಯಾನ ಎಂದು 2 ಭಾಗಗಳಾಗಿ ಇಬ್ಭಾಗವಾಯಿತು.


5) ಕನೂಜ್ : 5ನೇ ಬೌದ್ಧ ಸಮ್ಮೇಳನವನ್ನು ಹರ್ಷವರ್ಧನನು ಕನೂಜಿನಲ್ಲಿ ಸಾ.ಶ 643 ರಲ್ಲಿ ಹೂಯೆನ್ ತ್ಸಾಂಗ್ ಅಧ್ಯಕ್ಷತೆಯಲ್ಲಿ ನಡೆಸಿದನು.

🔰📚🔰

Also Read:- ಪ್ರಾಚೀನ ಭಾರತದ ಇತಿಹಾಸ PDF 


💥 Ancient History.pdf ಪ್ರಾಚೀನ ಇತಿಹಾಸ PDF              Very useful Download Now








 






Post a Comment

0 Comments

Important PDF Notes

Ad Code