Ad Code

Ticker

6/recent/ticker-posts

Click Below Image to Join Our Telegram For Latest Updates

[NOTES]FDA/SDA/PDO/D.Ed/B.Ed General knowledge 11-11-2021 Top-10 Question Answers With Explanations For Competitive Exams

 [NOTES]FDA/SDA/PDO/D.Ed/B.Ed General knowledge 

11-11-2021 Top-10  Question Answers With Explanations For Competitive Exams 

[NOTES]FDA/SDA/PDO/D.Ed/B.Ed General knowledge 10-11-2021 Top-10  Question Answers With Explanations For Competitive Exams

ಹಾಯ್ ಸ್ಪರ್ಧಾ ಮಿತ್ರರಿಗೆಲ್ಲ ನಮಸ್ಕಾರಗಳು....!!! ಚಾಣಕ್ಯ ಕಣಜ ವೆಬ್ ತಾಣಕ್ಕೆ ತಮಗೆಲ್ಲ ಆತ್ಮೀಯ ಸ್ವಾಗತ. 

ಆತ್ಮೀಯ ಸ್ಪರ್ಧಾರ್ಥಿಗಳೇ ನಿಮ್ಮ ಮುಂದೆ SDA,FDA,PDO,UPSC, RRB, KPSC,SSC
ಸಾವಿರಾರು ಹುದ್ದೆಗಳಿವೆ, ಆತ್ಮ ವಿಶ್ವಾಸದಿಂದ ಮುನ್ನಡೆದರೆ ಯಶಸ್ಸು ಸಾಧಿಸಬಹುದು, ಕೀಳರಿಮೆ ಹೊಂದಬೇಡಿ, ಶ್ರದ್ಧೆ, ಶ್ರಮದಿಂದ ಮುನ್ನಡೆದರೆ ಯಶಸ್ಸು ನಿಮ್ಮದಾಗುತ್ತದೆ.

ಚಾಣಕ್ಯ ಕಣಜ ಟೀಮ್ ಇಂದು ಸ್ಪರ್ಧಾತ್ಮಕ ಪರೀಕ್ಷೆಯ ಸಾಮಾನ್ಯ ಜ್ಞಾನ ಪತ್ರಿಕೆಯ ಅಂಶಗಳಾದ ಸಾಮಾನ್ಯ ಜ್ಞಾನವು ಅಂತರಾಷ್ಟ್ರೀಯ ವಿದ್ಯಮಾನ, ಭಾರತದ ಸಂವಿಧಾನವು,ಸಾಮಾನ್ಯ ವಿಜ್ಞಾನ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ, ಕಲೆ ಮತ್ತು ಸಂಸ್ಕೃತಿ, ಇತಿಹಾಸ,
ಕಂಪ್ಯೂಟರ್ ಸಾಕ್ಷರತೆ, ಪ್ರಚಲಿತ ಘಟನೆಗಳನ್ನು ಒಳಗೊಂಡ ಟಾಪ್ 10 ವಿವರಣೆ ಸಹಿತ ಪ್ರಮುಖ ಪ್ರಶ್ನೋತ್ತರಗಳನ್ನ  ಅಪ್ಡೇಟ್ ಮಾಡುತ್ತಿದೆ. ನೋಟ್  ಮಾಡಿಕೊಳ್ಳಿ. ಸ್ಪರ್ಧಾರ್ಥಿಗಳೇ ಎಸ್‌ಡಿಎ, ಎಫ್ಡಿಎ,ಪಿ.ಎಸ್.ಐ., ಕೆ.ಎ.ಎಸ್., ಪಿ.ಡಿ.ಒ ದಂತಹ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗೂಉಪಯುಕ್ತವಾಗಲಿದೆ.

🔷️💥🔷️

11-11-2021 Top-10  Question Answers With Explanations For Competitive Exams 


1) ಆರ್ಯಭಟ ಇವರ ಕಾಲದಲ್ಲಿ ಜೀವಿಸಿದ್ದರು?

ಎ) ಸಮುದ್ರ ಗುಪ್ತ
ಬಿ) 2ನೇ ಚಂದ್ರ ಗುಪ್ತ
ಸಿ) ಚಂದ್ರ ಗುಪ್ತ ಮೌರ್ಯ
ಡಿ) ಅಶೋಕ

ಉತ್ತರ:- 2ನೇ ಚಂದ್ರಗುಪ್ತ

ವಿವರಣೆ:- ಆರ್ಯಭಟನು ಗುಪ್ತರ 2ನೇ ಚಂದ್ರಗುಪ್ತನ
ಕಾಲದಲ್ಲಿ ಜೀವಿಸಿದ್ದನು. ಈತನ ಪ್ರಸಿದ್ದ ಕೃತಿ
“ಆರ್ಯಭಟೀಯಂ' ಇದು ಆಯುರ್ವೇದದ ಬಗ್ಗೆ ಮಾಹಿತಿಯನ್ನು ಒಳಗೊಂಡಿದೆ. ಆರ್ಯಭಟನು ಭಾರತದ ಖಗೋಳಶಾಸ್ತ್ರಜ್ಞ ಮತ್ತು ಗಣಿತಶಾಸ್ತ್ರಜ್ಞ ,ಸೌರಕೇಂದ್ರ ಸಿದ್ದಾಂತವನ್ನು ಮಂಡಿಸಿದನು.


2) ಮಹಮ್ಮದ್ ಬಿನ್ ತೊಘಲಕ್ ತನ್ನ ರಾಜಧಾನಿಯನ್ನು .
ದೆಹಲಿಯಿಂದ ಇಲ್ಲಿಗೆ ಬದಲಾಯಿಸಿದನು?

ಎ) ಕಲ್ಕತ್ತಾ
ಬಿ) ಲಾಹೋರ್
ಸಿ) ಕನೌಜ್
ಡಿ) ದೇವಗಿರಿ

ಉತ್ತರ:- ದೇವಗಿರಿ

ವಿವರಣೆ:- ಮಹಮದ್ ಬಿನ್ ತೊಘಲಕ್ ನು ತನ್ನ ಆಳ್ವಿಕೆಯಲ್ಲಿ ದೆಹಲಿಯಿಂದ ದೇವಗಿರಿಗೆ ರಾಜಧಾನಿಯನ್ನು,
ವರ್ಗಾವಣೆ ಮಾಡಿದನು.ಪ್ರಸ್ತುತ  ದೇವಗಿರಿಗೆ
ದೌಲತಾಬಾದ್ ಎಂದೂ ಕೂಡಾ ಕರೆಯುತ್ತಾರೆ. ಇದು
ಮಹಾರಾಷ್ಟ್ರದಲ್ಲಿದೆ.

3) ಪ್ರಪಂಚದಲ್ಲಿ ಏಕೈಕ ಹಿಂದೂ ರಾಷ್ಟ್ರ?

ಎ) ಶ್ರೀಲಂಕಾ
ಬಿ) ಭಾರತ
ಸಿ) ನೇಪಾಳ
ಡಿ) ಭೂತಾನ್

ಉತ್ತರ:- ನೇಪಾಳ

ವಿವರಣೆ:- ನೇಪಾಳವು ಹಿಮಾಲಯ ಪರ್ವತ ತಪ್ಪಲಿನ
ದೇಶವಾಗಿದ್ದು, ನೇಪಾಳದಲ್ಲಿ ಶೇ 80 ರಷ್ಟು ಮಂದಿ
ಹಿಂದೂ ಧರ್ಮೀಯರಿದ್ದಾರೆ. ಆದುದ್ದರಿಂದ ಇದನ್ನು
ಹಿಂದೂ ರಾಷ್ಟ್ರವೆಂದು ಕರೆಯುತ್ತಾರೆ.


4) ಕ್ಯೂಬಾ ಇದರಲ್ಲಿ ಒಂದು ದ್ವೀಪ

ಎ) ಶಾಂತಿಸಾಗರ
ಬಿ) ಅಟ್ಲಾಂಟಿಕ್ ಸಾಗರ
ಸಿ) ಕಪ್ಪುಸಮುದ್ರ
ಡಿ) ಕೆಂಪು ಸಮುದ್ರ

ಉತ್ತರ:- ಅಟ್ಲಾಂಟಿಕ್ ಸಾಗರ

ವಿವರಣೆ:- ಉತ್ತರ ಅಟ್ಲಾಂಟಿಕ್ ಸಾಗರದ ಬಳಿ ಕ್ಯೂಬಾ
ದ್ವೀಪವು ಕಂಡು ಬರುತ್ತದೆ. ಇದೊಂದು ಕೆರೆಬಿಯನ್
ಸಮುದ್ರದ ಬಳಿ ಕಂಡು ಬರುವ ದ್ವೀಪವಾಗಿದೆ.


5) ಕೊಂಕಣ ರೈಲು ಯೋಜನೆ ಈ ಕೆಳಕಂಡ ಸ್ಥಳಗಳನ್ನು
ಕೂಡಿಸುತ್ತದೆ

ಎ) ಕುರ್ಲ - ಕೊಚ್ಚಿ
ಬಿ) ಕೊಂಕಣ - ಕೊಚ್ಚಿ
ಸಿ) ಕೊಚ್ಚಿ - ಕನ್ಯಾಕುಮಾರಿ
ಡಿ) ಸೂರತ್ ಕೊಚ್ಚಿ

ಉತ್ತರ:- ಕುರ್ಲ ಕೊಚ್ಚಿ

ವಿವರಣೆ:- ಕೊಂಕಣ ರೈಲ್ವೆಯು ಮೂರು ರಾಜ್ಯಗಳನ್ನು
ಸಂಪರ್ಕಿಸುವ ಪಶ್ಚಿಮ ಘಟ್ಟದಲ್ಲಿ ಹಾದು ಹೋಗುವ
ರೈಲ್ವೆ ಯೋಜನೆಯಾಗಿದೆ. ಕೊಂಕಣ ರೈಲ್ವೆಯು
ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ
ನಡುವೆ ಸಂಪರ್ಕ ಕಲ್ಪಿಸುತ್ತದೆ. ಕೊಂಕಣ ರೈಲ್ವೆಯು 141,
ಕಿ.ಮೀ ಮಹಾರಾಷ್ಟ್ರದ ರೋಹಾದಿಂದ ಮಂಗಳೂರು
ವರೆಗೂ ಸಂಪರ್ಕ ಕಲ್ಪಿಸುತ್ತದೆ. ಜನವರಿ 26, 1998ರಲ್ಲಿ
ಈ ಯೋಜನೆಯು ಉದ್ಘಾಟನೆಯಾಯಿತು.
🔷️🔶️🔷️

6) ನಮ್ಮ ಸೌರಮಂಡಲದಲ್ಲಿನ ಅತ್ಯಂತ ದೊಡ್ಡ ಗ್ರಹ
ಯಾವುದೆಂದರೆ

ಎ) ಭೂಮಿ
ಬಿ) ಕುಜ
ಸಿ) ಗುರು
ಡಿ) ಇವು ಯಾವುವೂ ಅಲ್ಲ

ಉತ್ತರ:- ಗುರು

ವಿವರಣೆ:- ಗುರು ಗ್ರಹವು ಸೌರಮಂಡಲದ 8 ಗ್ರಹಗಳಲ್ಲೇ
ಅತಿ ದೊಡ್ಡ ಗ್ರಹವಾಗಿದೆ. ಈ ಗ್ರಹವು ಹೊಂದಿರುವ
ಉಪಗ್ರಹವಾದ ಗ್ಯಾನಿಮೇಡ ಕೂಡಾ ಸೌರಮಂಡಲದಲ್ಲೇ ಅತಿ ದೊಡ್ಡ ಉಪಗ್ರಹವಾಗಿದೆ. ಸೌರ ಮಂಡಲದಲ್ಲಿ ಎರಡನೇ ಅತಿ ದೊಡ್ಡ ಗ್ರಹ ಶನಿ ಗ್ರಹವಾಗಿದೆ. ಅತ್ಯಂತ ಚಿಕ್ಕ ಗ್ರಹ ಬುಧ
ಗ್ರಹವಾಗಿದೆ.


7)ವಿಕಿರಣ ಶೀಲತೆಯನ್ನು ಅಳೆಯಲು ಬಳಸುವುದು

ಎ) ಬ್ಯಾರೋಮೀಟರ್
ಬಿ) ಕ್ರೋನೋಮೀಟರ್
ಸಿ) ಗೀಗರ್ ಕೌಂಟರ್
ಡಿ) ಮೈಕ್ರೋಮೀಟರ್

ಉತ್ತರ:- ಗೀಗರ್ ಕೌಂಟರ್

ವಿವರಣೆ:- ವಿಕಿರಣ ಶೀಲತೆಯನ್ನು ಅಳೆಯಲು ಬಳಸುವ
ಸಾಧನ ಗಿಗರ್ ಮುಲ್ಲರ್ ಕೌಂಟರ್..ವಿಕಿರಣ ಶೀಲತೆಯ
ಮಾನವನ್ನು ಬೆಕ್ಚರಲ್‌ನಲ್ಲಿ ಅಳೆಯಲಾಗುತ್ತದೆ. ಹೆನ್ರಿ
ಬೆಕ್ಚರಲ್‌ನ್ನು ವಿಕಿರಣಶೀಲತೆಯ ಪಿತಾಮಹ ಎನ್ನುತ್ತಾರೆ.


8) ಸಿನ್ನಬಾರ್‌ನಿಂದ ಹೊರತೆಗೆಯುವ ಲೋಹವು
ಯಾವುದು ?

ಎ) ಪಾದರಸ
ಬಿ) ಕಬ್ಬಿಣ
ಸಿ) ತಾಮ್ರ
ಡಿ) ಸತುವು (ಜಿಂಕ್)

ಉತ್ತರ:- ಪಾದರಸ

ವಿವರಣೆ:- ಪಾದರಸದ ಅದಿರು ಸಿನ್ಬಾರ್, ಪಾದರಸವು
ದೇಹವನ್ನು ಸೇರಿದಾಗ ಮಿನಮಾಟ ರೋಗ ಬರುತ್ತದೆ.
ಪಾದರಸವು ದ್ರವರೂಪದಲ್ಲಿರುವ ಲೋಹವಾಗಿದೆ.
ಕಬ್ಬಿಣದ ಅದಿರುಗಳೆಂದರೆ - ಹೆಮಟೈಟ್, ಮ್ಯಾಗ್ನಟೈಟ್,
ಸಿಡರೈಟ್, ತಾಮ್ರದ ಅದಿರೆಂದರೆ ಕ್ಯುಪ್ಪೆಟ್,ಚಾಲೋಪೈರೆಟ್, ಸತುವಿನ ಅದಿರು ಪಿಂಚ್ ಬ್ಲೊಂಡೆ.


9) ಮನುಷ್ಯ ದೇಹದಲ್ಲಿ ಅತೀವ ಗಟ್ಟಿಯಾಗಿರುವ ವಸ್ತುವೆಂದರೆ

ಎ) ತೊಡೆಯ ಎಲುಬು
ಬಿ) ಹಲ್ಲಿನ ಎನಾಮಲ್
ಸಿ) ಕಾಲ್ಪೆರಳಿನ ಉಗುರ
ಡಿ) ದವಡೆಯ ಎಲುಬು

ಉತ್ತರ:- ಹಲ್ಲಿನ ಎನಾಮಲ್

ವಿವರಣೆ:- ಹಲ್ಲಿನ ಎನಾಮೆಲ್ ಭಾಗವು ಮಾನವನ ಅತಿ
ಗಟ್ಟಿಯಾದ ಭಾಗವಾಗಿದೆ. ಮಾನವನ ದಂತ ಸೂತ್ರ 2123.
ಮಾನವನ ಹಲ್ಲಿನಲ್ಲಿ ಕ್ಯಾಲ್ಸಿಯಂ ಮತ್ತು ರಂಜಕ ದಿಂದ
ಕೂಡಿದೆ.


10) ಪೈ ನ ಸಂಖ್ಯೆಯ ನಿಖರವಾದ ಮೌಲ್ಯ?
ಎ) 22/7
ಬಿ) 3.14
ಸಿ)3.1415
ಡಿ) ಇದಾವುದೂ ಅಲ್ಲ, Pಅಪರಿಮೇಯ(ಇನ್ಯಾಷನಲ್) ಸಂಖ್ಯೆ

ಉತ್ತರ:-22/ 7

ವಿವರಣೆ:- ಪೈ ನ ಮೌಲ್ಯವು 22/7 ಆಗಿದೆ. ಇದು ಗಣಿತದ
ಸ್ಥಿರವಾದ ಮೌಲ್ಯವಾಗಿದ್ದು, ಇದನ್ನು ವೃತ್ತದ ಸುತ್ತಳತೆ
ಮತ್ತು ವ್ಯಾಸದ ಅನುಪಾತವನ್ನು ಪ್ರತಿನಿಧಿಸುವಂತಹ
ಗಣಿತದ ಸ್ಥಿರಾಂಕವಾಗಿದೆ.


Also Read/ಇವುಗಳನ್ನು ಓದಿ,ಓದಲು ಲಿಂಕ್ ಮೇಲೆ ಕ್ಲಿಕ್ಕಿಸಿ👇👌

🌸 09-11-2021 Daily Top 10 GK Question Answers With Explanations,Useful For All KPSC Exams


🌸 10-11-2021 Daily Top 10 GK Question Answers With Explanations,Useful For All KPSC Exams

🔷️🔶️🔷️


Post a Comment

0 Comments

Karnataka TET Kannada Pedagogy Quiz Series-01/ಕರ್ನಾಟಕ ಟಿಇಟಿ ಕನ್ನಡ  ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-01
Karnataka TET Kannada Pedagogy Quiz Series-07/ಕರ್ನಾಟಕ ಟಿಇಟಿ ಕನ್ನಡ  ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-07
Karnataka TET Environmental Science Quiz Series-06/ಕರ್ನಾಟಕ ಟಿಇಟಿ ಪರಿಸರ ವಿಜ್ಞಾನ ರಸಪ್ರಶ್ನೆಗಳು ಸರಣಿ-06
KAR-TET Social Science and Social Science Pedagogy Quiz Series-03/ಕರ್ನಾಟಕ ಟಿಇಟಿ ಸಮಾಜ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-03
Social Science Quizzes For all Competitive Exams Part-104/ಸಮಾಜ ವಿಜ್ಞಾನ ರಸಪ್ರಶ್ನೆಗಳು
Karnataka TET Kannada Pedagogy Quiz Series-06/ಕರ್ನಾಟಕ ಟಿಇಟಿ ಕನ್ನಡ  ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-06
KARTET Educational Psychology Quiz Series-12/ಕರ್ನಾಟಕ ಟಿಇಟಿ ಶೈಕ್ಷಣಿಕ ಮನೋವಿಜ್ಞಾನ ಕ್ವಿಜ್ ಸರಣಿ-12
Karnataka TET Environmental Science Quiz Series-05/ಕರ್ನಾಟಕ ಟಿಇಟಿ ಪರಿಸರ ವಿಜ್ಞಾನ ರಸಪ್ರಶ್ನೆಗಳು ಸರಣಿ-05
Social Science Quizzes For all Competitive Exams Part-103/ಸಮಾಜ ವಿಜ್ಞಾನ ರಸಪ್ರಶ್ನೆಗಳು
KARTET Educational Psychology Quiz Series-13/ಕರ್ನಾಟಕ ಟಿಇಟಿ ಶೈಕ್ಷಣಿಕ ಮನೋವಿಜ್ಞಾನ ಕ್ವಿಜ್ ಸರಣಿ-13

Important PDF Notes

Ad Code