Ad Code

Ticker

6/recent/ticker-posts

Click Below Image to Join Our Telegram For Latest Updates

[NOTES]FDA/SDA/PDO/D.Ed/B.Ed General knowledge 12-11-2021 Top-10 Question Answers With Explanations For Competitive Exams

  [NOTES]FDA/SDA/PDO/D.Ed/B.Ed General knowledge 

12-11-2021 Top-10  Question Answers With Explanations For Competitive Exams 

[NOTES]FDA/SDA/PDO/D.Ed/B.Ed General knowledge 10-11-2021 Top-10  Question Answers With Explanations For Competitive Exams

ಹಾಯ್ ಸ್ಪರ್ಧಾ ಮಿತ್ರರಿಗೆಲ್ಲ ನಮಸ್ಕಾರಗಳು....!! ಚಾಣಕ್ಯ ಕಣಜ ವೆಬ್ ತಾಣಕ್ಕೆ ತಮಗೆಲ್ಲ ಆತ್ಮೀಯ ಸ್ವಾಗತ. 

ಆತ್ಮೀಯ ಸ್ಪರ್ಧಾರ್ಥಿಗಳೇ ನಿಮ್ಮ ಮುಂದೆ SDA,FDA,PDO,UPSC, RRB, KPSC,SSC
ಸಾವಿರಾರು ಹುದ್ದೆಗಳಿವೆ, ಆತ್ಮ ವಿಶ್ವಾಸದಿಂದ ಮುನ್ನಡೆದರೆ ಯಶಸ್ಸು ಸಾಧಿಸಬಹುದು, ಕೀಳರಿಮೆ ಹೊಂದಬೇಡಿ, ಶ್ರದ್ಧೆ, ಶ್ರಮದಿಂದ ಮುನ್ನಡೆದರೆ ಯಶಸ್ಸು ನಿಮ್ಮದಾಗುತ್ತದೆ.

ಚಾಣಕ್ಯ ಕಣಜ ಟೀಮ್ ಇಂದು ಸ್ಪರ್ಧಾತ್ಮಕ ಪರೀಕ್ಷೆಯ ಸಾಮಾನ್ಯ ಜ್ಞಾನ ಪತ್ರಿಕೆಯ ಅಂಶಗಳಾದ ಸಾಮಾನ್ಯ ಜ್ಞಾನವು ಅಂತರಾಷ್ಟ್ರೀಯ ವಿದ್ಯಮಾನ, ಭಾರತದ ಸಂವಿಧಾನವು,ಸಾಮಾನ್ಯ ವಿಜ್ಞಾನ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ, ಕಲೆ ಮತ್ತು ಸಂಸ್ಕೃತಿ, ಇತಿಹಾಸ,
ಕಂಪ್ಯೂಟರ್ ಸಾಕ್ಷರತೆ, ಪ್ರಚಲಿತ ಘಟನೆಗಳನ್ನು ಒಳಗೊಂಡ ಟಾಪ್ 10 ವಿವರಣೆ ಸಹಿತ ಪ್ರಮುಖ ಪ್ರಶ್ನೋತ್ತರಗಳನ್ನ  ಅಪ್ಡೇಟ್ ಮಾಡುತ್ತಿದೆ. ನೋಟ್  ಮಾಡಿಕೊಳ್ಳಿ. ಸ್ಪರ್ಧಾರ್ಥಿಗಳೇ ಎಸ್‌ಡಿಎ, ಎಫ್ಡಿಎ,ಪಿ.ಎಸ್.ಐ., ಕೆ.ಎ.ಎಸ್., ಪಿ.ಡಿ.ಒ ದಂತಹ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗೂಉಪಯುಕ್ತವಾಗಲಿದೆ.

🔷️💥🔷️

12-11-2021 Top-10  Question Answers With Explanations For Competitive Exams 

1. ಶಿಕ್ಷಣ ವಿಷಯವು ಭಾರತೀಯ ಸಂವಿಧಾನದ
ಕೆಳಗಿನ ಯಾವ ಪಟ್ಟಿಯಲ್ಲಿ ಇರುತ್ತದೆ?

ಎ) ಕೇಂದ್ರ ಪಟ್ಟಿ
ಬಿ) ರಾಜ್ಯ ಪಟ್ಟಿ
ಸಿ) ಸಮವರ್ತಿ ಪಟ್ಟಿ
ಡಿ) ಇದರಲ್ಲಿ ಯಾವುದೂ ಅಲ್ಲ

ಉತ್ತರ:- ಸಮವರ್ತಿ ಪಟ್ಟ

ವಿವರಣೆ:- 1976 ರಲ್ಲಿ ಮಾಡಲಾದ ಸಂವಿಧಾನದ 42ನೇ
ತಿದ್ದುಪಡಿಯಲ್ಲಿ ರಾಜ್ಯ ಪಟ್ಟಿಯಲ್ಲಿನ 5 ವಿಷಯಗಳಾದ
ಶಿಕ್ಷಣ, ಆರೋಗ್ಯ, ನ್ಯಾಯಾಂಗ ಆಡಳಿತ (ಹೈ ಕೋರ್ಟ್
ಮತ್ತು ಸುಪ್ರೀಂ ಕೋರ್ಟ್‌ನ್ನು ಹೊರತುಪಡಿಸಿ), ಅರಣ್ಯ
ಮತ್ತು ಪರಿಸರ, ತೂಕ ಮತ್ತು ಅಳತೆ ವಿಷಯಗಳನ್ನು
ಸೇರಿಸಲಾಗಿದೆ. ಸಂವಿಧಾನದ 11ನೇ ಭಾಗದಲ್ಲಿ
ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧದ ಬಗ್ಗೆ
ತಿಳಿಸಲಾಗಿದೆ. ಸಂವಿಧಾನದ 246ನೇ ವಿಧಿಯಲ್ಲಿ
ವಿಷಯಗಳನ್ನು ಮೂರು ಪಟ್ಟಿಗಳಾಗಿ ವಿಂಗಡಿಸಲಾಗಿದೆ.
ಅವುಗಳೆಂದರೆ - ಕೇಂದ್ರ ಪಟ್ಟಿ, ರಾಜ್ಯಪಟ್ಟಿ
ಮತ್ತು ಸಮವರ್ತಿ ಪಟ್ಟಿ, ಕೇಂದ್ರ ಪಟ್ಟಿಯಲ್ಲಿ 100
ವಿಷಯಗಳಿವೆ. ರಾಜ್ಯಪಟ್ಟಿಯಲ್ಲಿ 61 ವಿಷಯಗಳಿವೆ.
ಸಮವರ್ತಿ ಪಟ್ಟಿಯಲ್ಲಿ 52 ವಿಷಯಗಳಿವೆ.


2. ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಮೊದಲು
ಉಪರಾಷ್ಟ್ರಪತಿ ಯಾದವರು?


ಎ) ಡಾ.ರಾಜೇಂದ್ರ ಪ್ರಸಾದ್
ಬಿ) ಪಂಡಿತ್ ಜವಹಾರಲಾಲ್ ನೆಹರು
ಸಿ) ಡಾ.ರಾಧಾಕೃಷ್ಣನ್
ಡಿ) ಡಾ.ಜಾಕೀರ್ ಹುಸೇನ್.

ಉತ್ತರ:- ಡಾ.ರಾಧಾಕೃಷ್ಣನ್

ವಿವರಣೆ:- ಸರ್ವಪಲ್ಲಿ ಎಸ್. ರಾಧಾಕೃಷ್ಣನ್ ರವರು ಭಾರತದ
ಮೊದಲ ಉಪರಾಷ್ಟ್ರಪತಿಯಾಗಿ 1952 ರಿಂದ 1962
ರವರೆಗೆ ಕಾರ್ಯನಿರ್ವಹಿಸಿದ್ದಾರೆ. ಇವರು 2 ಬಾರಿ
ಉಪರಾಷ್ಟ್ರಪತಿಗಳಾಗುವ ಮೂಲಕ 10 ವರ್ಷಗಳ ಕಾಲ
ಭಾರತದ ಉಪರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸುವ ಮೂಲಕ ದೀರ್ಘಾವಧಿ ಕಾಲ ನಿರ್ವಹಿಸಿದ ಉಪರಾಷ್ಟ್ರಪತಿಯಾಗಿದ್ದಾರೆ. ಮತ್ತು ಭಾರತದ 2ನೇ ರಾಷ್ಟ್ರಪತಿಯಾಗಿ 1962 ರಿಂದ 1967ರವರೆಗೆ  ಕಾರ್ಯನಿರ್ವಹಿಸಿದ್ದಾರೆ.


3. ಭಾರತದಲ್ಲಿ ಭತ್ತ ಬೆಳೆಯುವಿಕೆ  ಯಾವಾಗ
ಪ್ರಾರಂಭಿಸಲಾಯಿತು

ಎ) ಸಿಂಧೂ ಕಣಿವೆಯ ನಾಗರೀಕತೆಯ ಕಾಲದಲ್ಲಿ
ಬಿ) ಆರ್ಯ ವಿಸ್ತರಣೆಯ ಎರಡನೇಯ ಹಂತದಲ್ಲಿ
ಸಿ) ಪುರಾಣಗಳ ಕಾಲದಲ್ಲಿ
ಡಿ) ಬೌದ್ಧರ ಕಾಲದಲ್ಲಿ

ಉತ್ತರ:- ಸಿಂಧೂ ಕಣಿವೆಯ ನಾಗರೀಕತೆಯ ಕಾಲದಲ್ಲಿ

ವಿವರಣೆ:- ಸಿಂಧೂ ಕಣಿವೆ ನಾಗರೀತೆಯ ಕಾಲದಲ್ಲಿ ಭತ್ತ
ಬೆಳೆಯುವುದನ್ನು ಪ್ರಾರಂಭಿಸಿದರು. ಈ ನಾಗರೀತೆಯು
ಸುಮಾರು ಕ್ರಿ.ಪೂ. 3000 ದಲ್ಲಿ ಅಸ್ತಿತ್ವದಲ್ಲಿತ್ತು. ಸಿಂಧೂ
ನಾಗರೀಕತೆಯ ಜನರ ಪ್ರಧಾನ ಕಸುಬು ಕೃಷಿ. ಇವರು
ಗೋಧಿ, ಬಾರ್ಲಿ, ಭತ್ತ, ಖರ್ಜೂರ, ಎಳ್ಳು, ನವಣೆ,
ಬಟಾಣಿ, ಎಣ್ಣೆಕಾಳುಗಳನ್ನು ಬೆಳೆಯುತ್ತಿದ್ದರು. ಈ
ನಾಗರೀಕತೆಯ ಪ್ರಮುಖ ನಗರಗಳಾದ ಹರಪ್ಪ ನಗರ -
1921 ರಲ್ಲಿ ದಯಾರಾಂ ಸಹಾನಿ, ಮೆಹೆಂಜೋದಾರೋ
ನಗರ - 1922 ರಲ್ಲಿ ಆರ್.ಡಿ. ಬ್ಯಾನರ್ಜಿಯವರು ಪತ್ತೆ
ಮಾಡಿದ್ದಾರೆ.


4. 'ಕುಸುಮ ಬಾಲೆ'ಯ ಕರ್ತೃ ಯಾರು ಗುರುತಿಸಿ,

ಎ) ಪು.ತಿ.ನರಸಿಂಹಾಚಾರ್
ಬಿ) ನರಸಿಂಹಸ್ವಾಮಿ
ನಿ) ಜಿ.ಎಸ್.ಶಿವರುದ್ರಪ್ಪ
ಡಿ) ದೇವನೂರ ಮಹದೇವ

ಉತ್ತರ:- ದೇವನೂರ ಮಹದೇವ

ವಿವರಣೆ:- ಒಡಲಾಳ, ಎದೆಗೆ ಬಿದ್ದ ಅಕ್ಷರ, ದ್ಯಾವನೂರು,
ಕುಸುಮಬಾಲೆ ಎಂಬ ಪ್ರಸಿದ್ದ ಕೃತಿಗಳನ್ನು ರಚಿಸಿದ್ದಾರೆ.
1990ರಲ್ಲಿ ಕುಸುಮಬಾಲೆ ಕೃತಿಗೆ ಕೇಂದ್ರ ಸಾಹಿತ್ಯ
ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

🔷️🌷🔷️

5. ಸರ್.ಎಂ.ವಿಶ್ವೇಶ್ವರಯ್ಯನವರು ಮೈಸೂರಿನ ದಿವಾನರಾಗಿ
ಯಾರ ಕಾಲದಲ್ಲಿ ಸೇವೆಯನ್ನು ಸಲ್ಲಿಸಿದರು ? ಗುರುತಿಸಿ,

ಎ) ದೊಡ್ಡರಾಜ ಒಡೆಯರ್
ಬಿ) ಕಾಂತರಾಜ ಒಡೆಯರ್
ಸಿ) ಕೃಷ್ಣರಾಜ ಒಡೆಯರ್
ಡಿ) ಜಯಚಾಮರಾಜೇಂದ್ರ ಒಡೆಯರ್

ಉತ್ತರ:- ಕೃಷ್ಣರಾಜ ಒಡೆಯರ್

ವಿವರಣೆ:- ಮೋಕ್ಷಗೊಂಡಂ ವಿಶ್ವೇಶ್ವರಯ್ಯನವರು 1912 ರಿಂದ 1918ರವರೆಗೆ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ ಆಸ್ಥಾನದಲ್ಲಿ ದಿವಾನರಾಗಿ ಕಾರ್ಯನಿರ್ವಹಿಸಿದ್ದರು.
ಇವರಿಗೆ 1965 ರಲ್ಲಿ ಭಾರತ ರತ್ನ ಪ್ರಶಸ್ತಿ ಬಂದಿತು.
ಇವರು ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ
ಸೆ.15, 1865ರಲ್ಲಿ ಜನಿಸಿದರು.ಇವರ ಹುಟ್ಟಿದ
ದಿನವಾದ ಸೆ. 15 ನ್ನು ಇಂಜಿನಿಯರ್ ದಿನವನ್ನಾಗಿ
ಆಚರಿಸಲಾಗುತ್ತಿದೆ. ನಾಲ್ವಡಿ ಕೃಷ್ಣರಾಜ ಒಡೆಯರ
ಕಾಲದಲ್ಲಿ 1916ರಲ್ಲಿ ಮೈಸೂರು ವಿಶ್ವವಿದ್ಯಾಲಯ
ಅಸ್ಥಿತ್ವಕ್ಕೆ ಬಂತು. ಕನ್ನಂಬಾಡಿ ಕಟ್ಟೆಗೆ ಅಡ್ಡಲಾಗಿ ಕೃಷ್ಣರಾಜ
ಸಾಗರ ಜಲಾಶಯ ನಿರ್ಮಿಸಲಾಯಿತು. ಬೆಂಗಳೂರಿನಲ್ಲಿ
ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜು, ಕೃಷಿವಿಜ್ಞಾನ ಕಾಲೇಜು.
ಪಶು ವೈದ್ಯಕೀಯ ಕಾಲೇಜು  ಸ್ಥಾಪನೆಯಾದ ವೈದ್ಯಕೀಯ
ಕಾಲೇಜುಗಳು, ಶಿವನಸಮುದ್ರ ಮತ್ತು ಜೋಗ್‌ನಲ್ಲಿ
ವಿದ್ಯುಚ್ಛಕ್ತಿ ಸ್ಥಾವರ ಸ್ಥಾಪಿಸಲಾಯಿತು. ಬೆಂಗಳೂರಿನ
ವಿಕ್ಟೋರಿಯಾ, ಮಿಂಟೋ, ವಾಣಿವಿಲಾಸ ಆಸ್ಪತ್ರೆಗಳು,
ಮಾನಸಿಕ ಆಸ್ಪತ್ರೆಗಳು ಅಸ್ಥಿತ್ವಕ್ಕೆ ಬಂದವು. ಭದ್ರಾವತಿ ಉಕ್ಕು
ಮತ್ತು ಕಬ್ಬಿಣದ ಕಾರ್ಖಾನೆ ಕಾಗದ ಕಾರ್ಖಾನೆ ಮಂಡ್ಯದ
ಸಕ್ಕರೆ ಕಾರ್ಖಾನೆ ಬೆಳಗೊಳದ ರಾಸಾಯನಿಕ ಕಾರ್ಖಾನೆ
ಮೈಸೂರು ಮತ್ತು ಚನ್ನಪಟ್ಟಣ ರೇಷ್ಮೆ ಕಾರ್ಖಾನೆಗಳು.


6. “ದಕ್ಷಿಣಾ ಪಥೇಶ್ವರ” ಎಂಬ ಬಿರುದು ಯಾರದು?

ಎ) ಇಮ್ಮಡಿ ಪುಲಿಕೇಶಿ
ಬಿ) ಹರ್ಷವರ್ಧನ |
ಸಿ) ವಿಕ್ರಮಾಧಿತ್ಯ
ಡಿ) ಸಮುದ್ರ ಗುಪ್ತ

ಉತ್ತರ:- ಇಮ್ಮಡಿ ಪುಲಿಕೇಶಿ

ವಿವರಣೆ:- ಇಮ್ಮಡಿ ಪುಲಿಕೇಶಿಯು ಚಾಲುಕ್ಯ ಸಂತತಿಯ
ಪ್ರಸಿದ್ದ ದೊರೆ. ಇಮ್ಮಡಿ ಪುಲಿಕೇಶಿ ಬಗ್ಗೆ ಮಾಹಿತಿ ನೀಡುವ
ಶಾಸನ ಐಹೊಳೆ ಮೇಗುತಿ ದೇವಾಲಯದ ಶಾಸನ, ಐಹೊಳೆ
ಶಾಸನ ರಚಿಸಿದವರು ರವಿಕೀರ್ತಿ, ಇವನು ಪುಲಿಕೇಶಿಯ
ಮಂತ್ರಿ ಹಾಗೂ ಜೈನಕವಿಯಾಗಿದ್ದನು. ಐಹೊಳೆ ಶಾಸನ
ಕನ್ನಡ ಭಾಷೆಯಲ್ಲಿದೆ. ಇಮ್ಮಡಿ ಪುಲಿಕೇಶಿಗೆ ಸತ್ಯಾಶ್ರಯ,
ವಲ್ಲಭವಲ್ಲಭೇಂದ್ರ, ಪೃಥ್ವಿವಲ್ಲಭ - ಪರಮೇಶ್ವರ ಎಂಬ
ಬಿರುದುಗಳಿದ್ದವು. ಹೂಯೆನ್ ತ್ಸಾಂಗ್‌ನು ಪುಲಿಕೇಶಿ
ಆಸ್ಥಾನವನ್ನು ಸೊಗಸಾಗಿ ಬಣ್ಣಿಸಿದ್ದಾನೆ. ಲೋಹನೇರ
ಶಾಸನವು ಪುಲಿಕೇಶಿಯನ್ನು ಪೂರ್ವಾಪರ ಸಮುದ್ರಾಧಿಪತಿ
ಎಂದು ಕೀರ್ತಿ ತಂದಿದೆ. ಇಮ್ಮಡಿ ಕೀರ್ತಿವರ್ಮನು ಚಾಲುಕ್ಯ
ವಂಶದ ಕೊನೆಯ ದೊರೆ. ಚಾಲುಕ್ಯರ ಕಾಲದ ನಾಣ್ಯವನ್ನು
ಗದ್ಯಾಣ ಎನ್ನುತ್ತಿದ್ದರು. ರಾಷ್ಟ್ರಕೂಟರ ದೊರೆ ಒಂದನೇ ಕೃಷ್ಣನು ಕೀರ್ತಿವರ್ಮನನ್ನು ಸೋಲಿಸಿ ಬಾದಾಮಿ ಚಾಲುಕ್ಯರ ಆಳ್ವಿಕೆ ಕೊನೆಗೊಳಿಸಿದರು. ಎರಡನೇ ಪುಲಿಕೇಶಿಯ ಸೊಸೆಯಾದ ರಾಣಿ ಎಜಯಾ ಅಥವಾ ಬಿಜ್ಞಾ ಎಂಬ ಕವಿಯತ್ರಿ ಕೌಮುದಿ ಮಹೋತ್ಸವ ಎಂಬ ನಾಟಕ ಬರೆದಿದ್ದಾಳೆ.


7. “ಸ್ವರಾಜ್ಯ ನನ್ನ ಜನ್ಮ ಹಕ್ಕು” ಇದನ್ನು ನಾನು ಪಡೆಯುತ್ತೇನೆ” ಇದನ್ನು ಹೇಳಿದವರು ಯಾರು?
ಗುರುತಿಸಿ


ಎ) ಲಾಲಾ ಲಜಪತ್ ರಾಯ್
ಬಿ) ಬಿಪಿನ್ ಚಂದ್ರಪಾಲ್
ಸಿ) ಬಾಲ ಗಂಗಾಧರ್ ತಿಲಕ್
ಡಿ) ಅನಿಬೆಸಂಟ್

ಉತ್ತರ:- ಬಾಲ ಗಂಗಾಧರ್ ತಿಲಕ್

ವಿವರಣೆ:- ಬಾಲಗಂಗಾಧರ್ ತಿಲಕ್‌ರು ತೀವ್ರಗಾಮಿ
ಹೋರಾಟಗಾರರಾಗಿದ್ದು, ಇವರು ಬ್ರಿಟಿಷರಿಂದ
ಸ್ವಾತಂತ್ರ್ಯ ಪಡೆಯಲು ಸ್ವಾತಂತ್ರ್ಯ ಹೋರಾಟದ
ಸಂದರ್ಭದಲ್ಲಿ ಈ ಹೇಳಿಕೆ ನೀಡಿದರು. ತೀವ್ರಗಾಮಿ
ನಾಯಕರಾದ ಲಾಲ್, ಬಾಲ್, ಪಾಲ್ ಇವರುಗಳಲ್ಲಿ
ಇವರೂ ಒಬ್ಬರಾಗಿದ್ದಾರೆ. ಲಾಲಾ ಲಜಪತರಾಯ್,
ಬಿಪಿನ್ ಚಂದ್ರಪಾಲ್, ಬಾಲ ಗಂಗಾಧರ್ ತಿಲಕ್


8. ಅಮೋಘವರ್ಷ ನೃಪತುಂಗ ಯಾವ ರಾಜವಂಶಕ್ಕೆ
ಸೇರಿದವನು?


ಎ) ಚಾಲುಕ್ಯರು
ಬಿ) ಗಂಗರು
ಸಿ) ರಾಷ್ಟ್ರಕೂಟರು
ಡಿ) ಕದಂಬರು

ಉತ್ತರ:- ರಾಷ್ಟ್ರಕೂಟರು

ವಿವರಣೆ:- ಅಮೋಘವರ್ಷ ನೃಪತುಂಗ ಕ್ರಿ.ಶ. 800 ರಿಂದ 878,ರವರೆಗೆ ಆಳ್ವಿಕೆ ನಡೆಸಿದ ರಾಷ್ಟ್ರಕೂಟರ ಪ್ರಸಿದ್ದ ದೊರೆ.
ಈತನ ಮೊದಲ ಹೆಸರು ಶರ್ವ.ಅಮೋಘವರ್ಷನು.
ವೈಷ್ಣವ ಮತಾವಲಂಬಿಯಾಗಿದ್ದನು. ತನ್ನ ಕೊನೆಯ
ಕಾಲದಲ್ಲಿ ಜೈನ ಧರ್ಮವನ್ನು ಸ್ವೀಕರಿಸಿದನು. ಇವನ
ಆಸ್ಥಾನದ ಕವಿ ಶ್ರೀವಿಜಯನಿಂದ ಕನ್ನಡದ ಮೊಟ್ಟ
ಮೊದಲ ಉಪಲಬ್ಧ ಕೃತಿಯಾದ "ಕವಿರಾಜಮಾರ್ಗ"
ರಚಿತವಾಗಿದೆ.


9.“ಪಾವರ್ಟಿ ಆಂಡ್ ದಿ ಆನ್ - ಬ್ರಿಟಿಷ್ ರೂಲ್
ಇನ್ ಇಂಡಿಯಾ” ಇದನ್ನು ಬರೆದವರು ಯಾರು?
ಗುರುತಿಸಿ,


ಎ) ಸೋಲಿ ಸೊರಾಬ್ಜಿ
ಬಿ) ಸುರೇಂದ್ರನಾಥ್ ಬ್ಯಾನರ್ಜಿ
ಸಿ) ಜಂಶಡ್ ಜಿ ಟಾಟಾ
ಡಿ) ದಾದಾಭಾಯಿ ನವರೋಜಿ

ಉತ್ತರ- ದಾದಾಬಾಯಿ ನವರೋಜಿ

ವಿವರಣೆ:- ಗ್ರಾಂಡ್ ಓಲ್ಸ್ ಮ್ಯಾನ್ ಆಫ್ ಇಂಡಿಯಾ ಎಂದೇ
ಖ್ಯಾತರಾದ ದಾದಾಬಾಯಿ ನವರೋಜಿಯವರು
ಭಾರತದ ಸಂಪತ್ತು ಬ್ರಿಟನ್ನಿನ್ನತ್ತ ಸೋರಿಕೆಯಾಗುವುದನ್ನು
ಗಮನ ಸೆಳೆಯಲು ಈ ಗ್ರಂಥವನ್ನು ಬರೆದಿದ್ದಾರೆ. ಇವರ
ಇತರ ಗ್ರಂಥಗಳೆಂದರೆ ಪಾವರ್ಟಿ ಆಫ್ ಇಂಡಿಯಾ, ದಿ
ವಾಂಟ್ ಅಂಡ್ ಮೀನ್ ಆಫ್ ದ ಇಂಡಿಯಾ.
🔷️🌷🔷️

10.'ಹೋಂ ರೂಲ್ ಚಳುವಳಿ'ಯ ನಾಯಕರು ಯಾರು?

ಎ) ಸಿ.ಆರ್.ದಾಸ್
ಬಿ) ಮೋತಿಲಾಲ್ ನೆಹರು
ಸಿ) ಅನಿ ಬೆಸೆಂಟ್
ಡಿ)ಸುರೇಂದ್ರನಾಥ್ ಬ್ಯಾನರ್ಜಿ

ಉತ್ತರ:- ಅನಿ ಬೆಸೆಂಟ್

ವಿವರಣೆ:- ಹೋಂ ರೂಲ್ ಚಳುವಳಿಯನ್ನು 1916ರ ಏಪ್ರಿಲ್‌ನಲ್ಲಿ ಅನಿಬೆಸೆಂಟ್‌ರವರು ಭಾರತದಲ್ಲಿ ಆರಂಭಿಸಿದರು.ಚಳುವಳಿಗೆ ಮುಂಚೂಣಿಯಲ್ಲಿದ್ದವರು ಬಾಲ
ಗಂಗಾಧರ್ ತಿಲಕ್, ಸರ್. ಎಸ್. ಸುಬ್ರಹ್ಮಣ್ಯ   ಅಯ್ಯರ್‌ ರವರು,ತಿಲಕ್ ರವರು ಪೂನಾದಲ್ಲಿಯೂ ಕೂಡ ಈ ಚಳುವಳಿಯನ್ನು ಆರಂಭಿಸಿದರು.

Also Read/ಇವುಗಳನ್ನು ಓದಿ,ಓದಲು ಲಿಂಕ್ ಮೇಲೆ ಕ್ಲಿಕ್ಕಿಸಿ👇👌

💥 09-11-2021 Daily Top 10 GK Question Answers With Explanations,Useful For All KPSC Exams


💥 10-11-2021 Daily Top 10 GK Question Answers With Explanations,Useful For All KPSC Exams


💥11-11-2021 Daily Top 10 GK Question Answers With Explanations,Useful For All KPSC Exams

🔷️🌷🔷️



Post a Comment

0 Comments

Karnataka TET Kannada Pedagogy Quiz Series-01/ಕರ್ನಾಟಕ ಟಿಇಟಿ ಕನ್ನಡ  ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-01
Karnataka TET Kannada Pedagogy Quiz Series-07/ಕರ್ನಾಟಕ ಟಿಇಟಿ ಕನ್ನಡ  ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-07
Karnataka TET Environmental Science Quiz Series-06/ಕರ್ನಾಟಕ ಟಿಇಟಿ ಪರಿಸರ ವಿಜ್ಞಾನ ರಸಪ್ರಶ್ನೆಗಳು ಸರಣಿ-06
KAR-TET Social Science and Social Science Pedagogy Quiz Series-03/ಕರ್ನಾಟಕ ಟಿಇಟಿ ಸಮಾಜ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-03
Social Science Quizzes For all Competitive Exams Part-104/ಸಮಾಜ ವಿಜ್ಞಾನ ರಸಪ್ರಶ್ನೆಗಳು
KARTET Educational Psychology Quiz Series-12/ಕರ್ನಾಟಕ ಟಿಇಟಿ ಶೈಕ್ಷಣಿಕ ಮನೋವಿಜ್ಞಾನ ಕ್ವಿಜ್ ಸರಣಿ-12
Karnataka TET Kannada Pedagogy Quiz Series-06/ಕರ್ನಾಟಕ ಟಿಇಟಿ ಕನ್ನಡ  ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-06
Karnataka TET Environmental Science Quiz Series-05/ಕರ್ನಾಟಕ ಟಿಇಟಿ ಪರಿಸರ ವಿಜ್ಞಾನ ರಸಪ್ರಶ್ನೆಗಳು ಸರಣಿ-05
Social Science Quizzes For all Competitive Exams Part-103/ಸಮಾಜ ವಿಜ್ಞಾನ ರಸಪ್ರಶ್ನೆಗಳು
KARTET Educational Psychology Quiz Series-13/ಕರ್ನಾಟಕ ಟಿಇಟಿ ಶೈಕ್ಷಣಿಕ ಮನೋವಿಜ್ಞಾನ ಕ್ವಿಜ್ ಸರಣಿ-13

Important PDF Notes

Ad Code