Ad Code

Ticker

6/recent/ticker-posts

Click Below Image to Join Our Telegram For Latest Updates

[NOTES]FDA/SDA/PDO/D.Ed/B.Ed General knowledge 13-11-2021 Top-10 Question Answers With Explanations For Competitive Exams

  [NOTES]FDA/SDA/PDO/D.Ed/B.Ed General knowledge 

13-11-2021 Top-10  Question Answers With Explanations For Competitive Exams 

[NOTES]FDA/SDA/PDO/D.Ed/B.Ed General knowledge 10-11-2021 Top-10  Question Answers With Explanations For Competitive Exams

ಹಾಯ್ ಸ್ಪರ್ಧಾ ಮಿತ್ರರಿಗೆಲ್ಲ ನಮಸ್ಕಾರಗಳು....!! ಚಾಣಕ್ಯ ಕಣಜ ವೆಬ್ ತಾಣಕ್ಕೆ ತಮಗೆಲ್ಲ ಆತ್ಮೀಯ ಸ್ವಾಗತ. 

ಆತ್ಮೀಯ ಸ್ಪರ್ಧಾರ್ಥಿಗಳೇ ನಿಮ್ಮ ಮುಂದೆ SDA,FDA,PDO,UPSC, RRB, KPSC,SSC
ಸಾವಿರಾರು ಹುದ್ದೆಗಳಿವೆ, ಆತ್ಮ ವಿಶ್ವಾಸದಿಂದ ಮುನ್ನಡೆದರೆ ಯಶಸ್ಸು ಸಾಧಿಸಬಹುದು, ಕೀಳರಿಮೆ ಹೊಂದಬೇಡಿ, ಶ್ರದ್ಧೆ, ಶ್ರಮದಿಂದ ಮುನ್ನಡೆದರೆ ಯಶಸ್ಸು ನಿಮ್ಮದಾಗುತ್ತದೆ.

ಚಾಣಕ್ಯ ಕಣಜ ಟೀಮ್ ಇಂದು ಸ್ಪರ್ಧಾತ್ಮಕ ಪರೀಕ್ಷೆಯ ಸಾಮಾನ್ಯ ಜ್ಞಾನ ಪತ್ರಿಕೆಯ ಅಂಶಗಳಾದ ಸಾಮಾನ್ಯ ಜ್ಞಾನವು ಅಂತರಾಷ್ಟ್ರೀಯ ವಿದ್ಯಮಾನ, ಭಾರತದ ಸಂವಿಧಾನವು,ಸಾಮಾನ್ಯ ವಿಜ್ಞಾನ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ, ಕಲೆ ಮತ್ತು ಸಂಸ್ಕೃತಿ, ಇತಿಹಾಸ,
ಕಂಪ್ಯೂಟರ್ ಸಾಕ್ಷರತೆ, ಪ್ರಚಲಿತ ಘಟನೆಗಳನ್ನು ಒಳಗೊಂಡ ಟಾಪ್ 10 ವಿವರಣೆ ಸಹಿತ ಪ್ರಮುಖ ಪ್ರಶ್ನೋತ್ತರಗಳನ್ನ  ಅಪ್ಡೇಟ್ ಮಾಡುತ್ತಿದೆ. ನೋಟ್  ಮಾಡಿಕೊಳ್ಳಿ. ಸ್ಪರ್ಧಾರ್ಥಿಗಳೇ ಎಸ್‌ಡಿಎ, ಎಫ್ಡಿಎ,ಪಿ.ಎಸ್.ಐ., ಕೆ.ಎ.ಎಸ್., ಪಿ.ಡಿ.ಒ ದಂತಹ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗೂಉಪಯುಕ್ತವಾಗಲಿದೆ.

🔷️💥🔷️

13-11-2021 Top-10  Question Answers With Explanations For Competitive Exams 

1) ಎತ್ತರದ ಪ್ರದೇಶಗಳಲ್ಲಿ ಗಾಳಿಯ ಒತ್ತಡವು

ಎ) ಹೆಚ್ಚುತ್ತದೆ
ಬಿ) ವ್ಯತ್ಯಾಸವನ್ನು ಹೊಂದುವುದಿಲ್ಲ
ಸಿ) ಋತುಗಳನ್ನು ಅವಲಂಬಿಸಿರುತ್ತದೆ
ಡಿ) ಕಡಿಮೆಯಾಗುತ್ತದೆ

ಉತ್ತರ:- ಕಡಿಮೆಯಾಗುತ್ತದೆ

ವಿವರಣೆ:- ಭೂಮಿಯಿಂದ ಎತ್ತರಕ್ಕೆ ಹೋದಂತೆ ಗಾಳಿಯು
ಕಡಿಮೆಯಾಗುವುದರಿಂದ ಗಾಳಿಯ ಒತ್ತಡವು ಕೂಡಾ
ಕಡಿಮೆಯಾಗುತ್ತದೆ. ಧ್ರುವ ಪ್ರದೇಶಗಳಲ್ಲಿ ಗಾಳಿಯ
ಒತ್ತಡ ಹೆಚ್ಚಾಗಿರುತ್ತದೆ.


2) ಚರ್ಮದ ಕಂದುಬಣ್ಣಕ್ಕೆ ಕಾರಣವಾದ ವರ್ಣ ದ್ರವ್ಯವು
ಯಾವುದು?


ಎ) ಹಿಮೋಗ್ಲೋಬಿನ್
ಬಿ) ಸೀಬಂ
ಸಿ) ಕ್ಲೋರೋಫಿಲ್
ಡಿ) ಮೆಲಾನಿನ್

ಉತ್ತರ:- ಮೆಲಾನಿನ್

ವಿವರಣೆ:- ಮೆಲಾನಿನ್‌ನ್ನು ಹೊರ ಚರ್ಮದ ಒಳಪದರದ
ಮೇಲೆ ನೊಸೈಟ್ ಕೋಶಗಳು ಉತ್ಪತ್ತಿ ಮಾಡುತ್ತವೆ.
ಚರ್ಮದ ಹೊರ ಪದರವು ಸಜೀವಿ ಕೋಶಗಳಿಂದ
ಕೂಡಿದ್ದು, ಇದನ್ನು ಬೆಳೆಯುವ ಪದರ' ಎಂದು ಕರೆ-
ಯುತ್ತಾರೆ. ಈ ಪದರವು ಹೊಸ ಕೋಶಗಳನ್ನು ಉತ್ಪತ್ತಿ
ಮಾಡುತ್ತದೆ. ಮತ್ತು ಚರ್ಮದ ಬಣ್ಣಕ್ಕೆ ಕಾರಣವಾದ
ಮೆಲಾನಿನ್ ಎಂಬ ವರ್ಣಕವನ್ನು ತಯಾರಿಸುತ್ತದೆ.
ಬೆಳೆಯುವ ಪದರವು ಸೂರ್ಯನಿಂದ
ನೇರಳಾತೀತ ಕಿರಣಗಳಿಂದ ಒಳಗಿನ ಅಂಗಾಂಶಗಳು
ನಾಶವಾಗದಂತೆ ರಕ್ಷಿಸುತ್ತದೆ. ಮೆಲನಿನ್
ಕೂದಲು ಮತ್ತು ಕಣ್ಣಿನ ಐರಿಸ್ ಭಾಗದಲ್ಲಿ ಕಂಡು
ಬರುತ್ತದೆ.


3) ಹೃದಯಕ್ಕೆ ರಕ್ತವನ್ನು ಸಾಗಿಸುವುದು ಯಾವುದು?

ಎ) ಅಪಧಮನಿಗಳು (ಆರ್ಟಿರೀಸ್ )
ಬಿ) ನರಗಳು (ನರ್ವ್)
ಸಿ) ಅಭಿಧಮನಿಗಳು (ವೆಯ್ಸ್ )
ಡಿ) ಸಣ್ಣ ಅಪಧಮನಿಗಳು (ಆರ್ಟಿರಿಯೋಲ್ಸ್)

ಉತ್ತರ:- ಅಭಿಧಮನಿಗಳು.

ವಿವರಣೆ:- ಹೃದಯದ ಒಳಗೆ ರಕ್ತವನ್ನು ಸಾಗಿಸುವಂತಹ
ರಕ್ತನಾಳಗಳನ್ನು ಅಭಿಧಮನಿಗಳು ಎಂದು ಕರೆಯುತ್ತಾರೆ. ಇವು ದೇಹದ ವಿವಿಧ ಭಾಗಗಳಿಂದ ಮಲಿನ (ಇಂಗಾಲದ ಡೈ
ಆನ್ಲೈಡ್) ಯುಕ್ತ ರಕ್ತವನ್ನು ಹೃದಯಕ್ಕೆ ಕೊಂಡೊಯ್ಯುತ್ತದೆ.
ಹೃದಯದಿಂದ ಹೊರಗೆ ರಕ್ತವನ್ನು ಕೊಂಡೊಯ್ಯುವ ನಾಳಗಳನ್ನು ಅಪಧಮನಿಗಳು ಎಂದು  ಕರೆಯುತ್ತಾರೆ. ರಕ್ತವು ದೇಹದ ವಿವಿಧ ಭಾಗಕ್ಕೆ ಸಣ್ಣ ರಕ್ತನಾಳಗಳ ಮೂಲಕ ವಿಭಜನೆಯಾಗಿ ಲೋಮನಾಳಗಳ ಮೂಲಕ ದೇಹದ ವಿವಿಧ ಭಾಗ, ಎಲ್ಲಾ ಜೀವಕೋಶಗಳಿಗೂ ಆಮ್ಲಜನಕ ಯುಕ್ತ ರಕ್ತವನ್ನು ಸರಬರಾಜು ಮಾಡುತ್ತದೆ.


4) ಇವರಲ್ಲಿ ಯಾರು ಪ್ರಖ್ಯಾತ ಗಣಿತಜ್ಞರಾಗಿದ್ದರು?

ಎ) ಚರಕ
ಬಿ) ಸುಶೃತ
ಸಿ) ವಿಕ್ರಮಾದಿತ್ಯ- 1
ಡಿ) ಭಾಸ್ಕರ - 2

ಉತ್ತರ:- ಭಾಸ್ಕರ - 2

ವಿವರಣೆ:- ಭಾಸ್ಕರ – 2 ಭಾರತದ ಪ್ರಖ್ಯಾತ ಗಣಿತಜ್ಞರಾಗಿದ್ದರು.ಇವರು ಸಿದ್ದಾಂತಿಕ ಶಿರೋಮಣಿ ಎಂಬ ಗ್ರಂಥವನ್ನು ಬರೆದಿದ್ದಾರೆ. ಭಾರತದ 2ನೇ ಉಪಗ್ರಹವನ್ನು ಇವರ ಹೆಸರಿನಲ್ಲಿ ಉಡಾಯಿಸಲಾಯಿತು.


5) ಮನುಷ್ಯರಲ್ಲಿ ಸಾಮಾನ್ಯವಾಗಿ ನಾಡಿ ಬಡಿತ ಎಷ್ಟು?

ಎ) ನಿಮಿಷಕ್ಕೆ ಸುಮಾರು 36 ಬಡಿತ
ಬಿ) ನಿಮಿಷಕ್ಕೆ ಸುಮಾರು 72 ಬಡಿತ
ಸಿ) ನಿಮಿಷಕ್ಕೆ ಸುಮಾರು 144 ಬಡಿತ
ಡಿ) ನಿಮಿಷಕ್ಕೆ ಸುಮಾರು 128 ಬಡಿತ

ಉತ್ತರ:- ನಿಮಿಷಕ್ಕೆ ಸುಮಾರು 72 ಬಡಿತ

ವಿವರಣೆ:- ಮಾನವನ ಹೃದಯವು ನಿಮಿಷಕ್ಕೆ ಸುಮಾರು 72
ಬಾರಿ ಬಡಿಯುತ್ತದೆ. ಮಗುವಿನ ಹೃದಯದ ಬಡಿತ
ಪ್ರತಿ ನಿಮಿಷಕ್ಕೆ 100 ರಿಂದ 120 ಬಾರಿ ಬಡಿಯುತ್ತದೆ.
🔶️🔰🔶️

6)ಅಯೋಡಿನ್ ಕೊರತೆಯಿಂದ ಉಂಟಾಗುವ ನ್ಯೂನತೆಯಾವುದು?

ಎ) ಗಾಯ್ಟರ್
ಬಿ) ಸ್ಕರ್ವಿ
ಸಿ) ರಿಕೆಟ್ಸ್
ಡಿ) ಕ್ವಾಷಿಯೊರ್ಕರ್

ಉತ್ತರ:- ಗಾಯ್ಟರ್

ವಿವರಣೆ:- ಗಾಯಿಟರ್ (ಗಳಗಂಡ) ರೋಗವು ಅಯೋಡಿನ್
(ಉಪ್ಪು) ಅಂಶದ ಕೊರತೆಯಿಂದ ಕಂಡು ಬರುತ್ತದೆ.
ಅಯೋಡಿನ್ ಸೇವನೆಯಿಂದ ಥೈರಾಕ್ಸಿನ್ ಹಾರ್ಮೋನ್
ಸ್ರವಿಕೆಯುಂಟಾಗುತ್ತದೆ. ಉಪ್ಪಿನಂಶದ ಕೊರತೆ-ಯುಂಟಾಗಿ ಥೈರಾಕ್ಸಿನ್ ಹಾರ್ಮೋನ್‌ನ ಸ್ರವಿಕೆ ಕಡಿಮೆಯಾಗಿ ಗಾಯಿಟರ್ ರೋಗ ಕಂಡು ಬರುತ್ತದೆ.ಈ ರೋಗವನ್ನು ಸ್ಥಾನಿಕ ವ್ಯಾಧಿ' ಎಂದು ಕರೆಯುವರು.


7) ಭಾರತದ ಮುಖ್ಯ ಚುನಾವಣಾ ಆಯುಕ್ತರು ಯಾವ
ಈ ಕೆಳಕಂಡವರಿಂದ ನೇಮಿಸಲ್ಪಡುತ್ತಾರೆ?


ಎ) ಪ್ರಧಾನ ಮಂತ್ರಿಯ ಸಲಹೆಯ ಮೇಲೆ ರಾಷ್ಟ್ರಾಧ್ಯಕ್ಷರಿಂದ
ಬಿ) ಸಚಿವ ಸಂಪುಟದಿಂದ
ಸಿ) ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಂದ
ಡಿ) ಭಾರತದ ಪಾರ್ಲಿಮೆಂಟಿನಿಂದ

ಉತ್ತರ:- ಪ್ರಧಾನ ಮಂತ್ರಿಯ ಸಲಹೆಯ ಮೇಲೆ ರಾಷ್ಟ್ರಾಧ್ಯಕ್ಷರಿಂದ

ವಿವರಣೆ:-ಭಾರತದ ಚುನಾವಣಾ ಆಯೋಗವನ್ನು
ಸಂವಿಧಾನದ 324ನೇ ವಿಧಿಯನ್ವಯ ಅವಕಾಶ
ನೀಡಲಾಗಿದೆ. ಭಾರತದ ಮುಖ್ಯ ಚುನಾವಣಾ
ಆಯುಕ್ತರನ್ನು ಮತ್ತು ಆಯುಕ್ತರನ್ನು ರಾಷ್ಟ್ರಪತಿಗಳು
ನೇಮಿಸುತ್ತಾರೆ. ಪ್ರಸ್ತುತ ಚುನಾವಣಾ ಆಯೋಗವು ಒಬ್ಬ
ಮುಖ್ಯ ಚುನಾವಣಾ ಆಯುಕ್ತರು, ಹಾಗೂ ಇಬ್ಬರು
ಚುನಾವಣಾ ಆಯುಕರನ್ನು ಒಳಗೊಂಡಿದೆ.


8) ಮಗಧ ಸಾಮ್ರಾಜ್ಯದ ಮೊಟ್ಟಮೊದಲ ರಾಜಧಾನಿ
ಯಾವುದು ? ಗುರುತಿಸಿ.


ಎ) ರಾಜಗೀರ್
ಬಿ) ಪಾಟಲೀಪುತ್ರ
ಸಿ) ಕಪಿಲವಸ್ತು
ಡಿ) ಭಿಲಸ

ಉತ್ತರ:- ರಾಜಗೀರ್

ವಿವರಣೆ:- ಮಗಧ ಸಾಮ್ರಾಜ್ಯದ ಮೊಟ್ಟ ಮೊದಲ ರಾಜಧಾನಿ
ರಾಜಗೀರ್ ಆಗಿತ್ತು . ರಾಜಗೀರ್‌ನ್ನು ರಾಜಗೃಹ ಎಂದು ಕರೆಯಲಾಗುತ್ತದೆ. ನಂತರದ ರಾಜಧಾನಿ ಪಾಟಲೀಪುತ್ರವಾಗಿತ್ತು. ಪಾಟಲೀಪುತ್ರವನ್ನು ಪಾಟ್ನಾ
ಎಂದು ಕರೆಯಲಾಗುತ್ತಿತ್ತು.


9) ಕರ್ನಾಟಕದಲ್ಲಿ ಭೂಕಂಪಮಾಪನ ಕೇಂದ್ರವು ಎಲ್ಲಿದೆ?

ಎ) ಬೆಂಗಳೂರು
ಬಿ) ಗೌರಿಬಿದನೂರು
ಸಿ) ಹುಲಿಯೂರು ದುರ್ಗ
ಡಿ) ಬೀದರ್

ಉತ್ತರ:- ಗೌರಿಬಿದನೂರು

ವಿವರಣೆ:- ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ
ಗೌರಿಬಿದನೂರಿನಲ್ಲಿ ಭೂಕಂಪನ ಮಾಪನ ಕೇಂದ್ರವಿದೆ.
ಭಾರತದಲ್ಲಿರುವ ಭೂಕಂಪನ ಕೇಂದ್ರಗಳು ಕೊಡೈಕೆನಾಲ್
(ತಮಿಳುನಾಡು), ಕೊಲಾಬಾ ,ಕೋಲ್ಕತ್ತಾ (ಪ. ಬಂಗಾಳ), ಪೂನಾ (ಮಹಾರಾಷ್ಟ).


10) ಒಂದು ತ್ರಿಕೋನದ ಎರಡು ಬಾಹುಗಳ ವರ್ಗದ
ಮೊತ್ತವು ಯಾವಾಗಲೂ


ಎ) ಮೂರನೆಯ ಬಾಹುವಿಗಿಂತ ಹೆಚ್ಚಾಗಿರುತ್ತದೆ
ಬಿ) ಮೂರನೆಯ ಬಾಹುವಿಗೆ ಸಮನಾಗಿರುತ್ತದೆ
ಸಿ) ಮೂರನೆಯ ಬಾಹುಎಗೆ ಕಡಿಮೆಯಾಗಿರುತ್ತದೆ.
ಡಿ) ಮೂರನೆಯ ಬಾಹುವಿನ ವರ್ಗಕ್ಕೆ ಸಮನಾಗಿರುತ್ತದೆ

ಉತ್ತರ:-ಮೂರನೆಯ ಬಾಹುವಿನ ವರ್ಗಕ್ಕೆ ಸಮನಾಗಿರುತ್ತದೆ

ವಿವರಣೆ:- ಪೈಥಾಗೋರಸ್ ಪ್ರಮೇಯದ ಪ್ರಕಾರ ಲಂಬಕೋನ ತಿಭುಜದ 2 ಬಾಹುಗಳ ವರ್ಗದ ಮೊತ್ತವು ಮೂರನೇ ಬಾಹುವಿನ ವರ್ಗಕ್ಕೆ ಸಮವಾಗಿರುತ್ತದೆ.

Also Read/ಇವುಗಳನ್ನು ಓದಿ,ಓದಲು ಲಿಂಕ್ ಮೇಲೆ ಕ್ಲಿಕ್ಕಿಸಿ👇👌

💥 09-11-2021 Daily Top 10 GK Question Answers With Explanations,Useful For All KPSC Exams


💥 10-11-2021 Daily Top 10 GK Question Answers With Explanations,Useful For All KPSC Exams


💥11-11-2021 Daily Top 10 GK Question Answers With Explanations,Useful For All KPSC Exams


💥12-11-2021 Daily Top 10 GK Question Answers With Explanations,Useful For All KPSC Exams

🔶️🔰🔶️




Post a Comment

0 Comments

Karnataka TET Kannada Pedagogy Quiz Series-01/ಕರ್ನಾಟಕ ಟಿಇಟಿ ಕನ್ನಡ  ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-01
Karnataka TET Kannada Pedagogy Quiz Series-07/ಕರ್ನಾಟಕ ಟಿಇಟಿ ಕನ್ನಡ  ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-07
Karnataka TET Environmental Science Quiz Series-06/ಕರ್ನಾಟಕ ಟಿಇಟಿ ಪರಿಸರ ವಿಜ್ಞಾನ ರಸಪ್ರಶ್ನೆಗಳು ಸರಣಿ-06
KAR-TET Social Science and Social Science Pedagogy Quiz Series-03/ಕರ್ನಾಟಕ ಟಿಇಟಿ ಸಮಾಜ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-03
Social Science Quizzes For all Competitive Exams Part-104/ಸಮಾಜ ವಿಜ್ಞಾನ ರಸಪ್ರಶ್ನೆಗಳು
KARTET Educational Psychology Quiz Series-12/ಕರ್ನಾಟಕ ಟಿಇಟಿ ಶೈಕ್ಷಣಿಕ ಮನೋವಿಜ್ಞಾನ ಕ್ವಿಜ್ ಸರಣಿ-12
Karnataka TET Kannada Pedagogy Quiz Series-06/ಕರ್ನಾಟಕ ಟಿಇಟಿ ಕನ್ನಡ  ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-06
Karnataka TET Environmental Science Quiz Series-05/ಕರ್ನಾಟಕ ಟಿಇಟಿ ಪರಿಸರ ವಿಜ್ಞಾನ ರಸಪ್ರಶ್ನೆಗಳು ಸರಣಿ-05
Social Science Quizzes For all Competitive Exams Part-103/ಸಮಾಜ ವಿಜ್ಞಾನ ರಸಪ್ರಶ್ನೆಗಳು
KARTET Educational Psychology Quiz Series-13/ಕರ್ನಾಟಕ ಟಿಇಟಿ ಶೈಕ್ಷಣಿಕ ಮನೋವಿಜ್ಞಾನ ಕ್ವಿಜ್ ಸರಣಿ-13

Important PDF Notes

Ad Code