Ad Code

Ticker

6/recent/ticker-posts

Click Below Image to Join Our Telegram For Latest Updates

[NOTES]FDA/SDA/PDO/D.Ed/B.Ed General knowledge 14-11-2021 Top-10 Question Answers With Explanations For Competitive Exams

  [NOTES]FDA/SDA/PDO/D.Ed/B.Ed General knowledge 

14-11-2021 Top-10  Question Answers With Explanations For Competitive Exams 


[NOTES]FDA/SDA/PDO/D.Ed/B.Ed General knowledge 10-11-2021 Top-10  Question Answers With Explanations For Competitive Exams

ಹಾಯ್ ಸ್ಪರ್ಧಾ ಮಿತ್ರರಿಗೆಲ್ಲ ನಮಸ್ಕಾರಗಳು....!! ಚಾಣಕ್ಯ ಕಣಜ ವೆಬ್ ತಾಣಕ್ಕೆ ತಮಗೆಲ್ಲ ಆತ್ಮೀಯ ಸ್ವಾಗತ. 

ಆತ್ಮೀಯ ಸ್ಪರ್ಧಾರ್ಥಿಗಳೇ ನಿಮ್ಮ ಮುಂದೆ SDA,FDA,PDO,UPSC, RRB, KPSC,SSC
ಸಾವಿರಾರು ಹುದ್ದೆಗಳಿವೆ, ಆತ್ಮ ವಿಶ್ವಾಸದಿಂದ ಮುನ್ನಡೆದರೆ ಯಶಸ್ಸು ಸಾಧಿಸಬಹುದು, ಕೀಳರಿಮೆ ಹೊಂದಬೇಡಿ, ಶ್ರದ್ಧೆ, ಶ್ರಮದಿಂದ ಮುನ್ನಡೆದರೆ ಯಶಸ್ಸು ನಿಮ್ಮದಾಗುತ್ತದೆ.

ಚಾಣಕ್ಯ ಕಣಜ ಟೀಮ್ ಇಂದು ಸ್ಪರ್ಧಾತ್ಮಕ ಪರೀಕ್ಷೆಯ ಸಾಮಾನ್ಯ ಜ್ಞಾನ ಪತ್ರಿಕೆಯ ಅಂಶಗಳಾದ ಸಾಮಾನ್ಯ ಜ್ಞಾನವು ಅಂತರಾಷ್ಟ್ರೀಯ ವಿದ್ಯಮಾನ, ಭಾರತದ ಸಂವಿಧಾನವು,ಸಾಮಾನ್ಯ ವಿಜ್ಞಾನ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ, ಕಲೆ ಮತ್ತು ಸಂಸ್ಕೃತಿ, ಇತಿಹಾಸ,
ಕಂಪ್ಯೂಟರ್ ಸಾಕ್ಷರತೆ, ಪ್ರಚಲಿತ ಘಟನೆಗಳನ್ನು ಒಳಗೊಂಡ ಟಾಪ್ 10 ವಿವರಣೆ ಸಹಿತ ಪ್ರಮುಖ ಪ್ರಶ್ನೋತ್ತರಗಳನ್ನ  ಅಪ್ಡೇಟ್ ಮಾಡುತ್ತಿದೆ. ನೋಟ್ಸ್  ಮಾಡಿಕೊಳ್ಳಿ. ಸ್ಪರ್ಧಾರ್ಥಿಗಳೇ ಎಸ್‌ಡಿಎ, ಎಫ್ಡಿಎ,ಪಿ.ಎಸ್.ಐ., ಕೆ.ಎ.ಎಸ್., ಪಿ.ಡಿ.ಒ ದಂತಹ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗೂಉಪಯುಕ್ತವಾಗಲಿದೆ.

🔷️💥🔷️

14-11-2021 Top-10  Question Answers With Explanations For Competitive Exams 


1) ಯಾವ ನದಿ ಅರಬ್ಬಿ ಸಮುದ್ರಕ್ಕೆ ಸೇರುತ್ತದೆ
ಗುರುತಿಸಿ,


1) ಶಿಂಷಾ
2) ನೇತ್ರಾವತಿ
3) ಹೇಮಾವತಿ
4) ಭೀಮಾ

ಉತ್ತರ:- ನೇತ್ರಾವತಿ

ವಿವರಣೆ:- ನೇತ್ರಾವತಿ ನದಿಯು ಅರಬ್ಬಿ ಸಮುದ್ರ ಸೇರುತ್ತದೆ.
ಇದು ಚಿಕ್ಕಮಂಗಳೂರು ಜಿಲ್ಲೆಯ ಕುದುರೆ ಮುಖದ
ಎಳನೀರು ಘಟ್ಟದಲ್ಲಿ ಭಾಂಗ್ರಾಬಲಿಗೆ ಕಣಿವೆಯಲ್ಲಿ
ಉಗಮವಾಗುತ್ತದೆ.ಇದನ್ನು ಪ್ರಾಚೀನವಾಗಿ ಬಂಟ್ವಾಳ
ನದಿ ಎಂದು ಕರೆಯುತ್ತಿದ್ದರು. ಇದು ಉಪ್ಪಿನಂಗಡಿಯಲ್ಲಿ
ಕುಮಾರಧಾರಾ ನದಿಯೊಂದಿಗೆ ವಿಲೀನವಾಗಿ ಸೇರುತ್ತಾ
ಅರಬೀ ಸಮುದ್ರ ಸೇರುತ್ತದೆ..


2) ಅಲಹಾಬಾದಿನ 'ಆಜಾದ್ ಪಾರ್ಕ್ ' ಯಾರ ಸ್ಮರಣೆಯಲ್ಲಿ ಹೆಸರಿಸಲಾಗಿದೆ ?

1) ಮೌಲಾನಾ ಆಜಾದ್
2) ಗುಲಾಮ್ ನಬಿ ಆಜಾದ್
3) ಚಂದ್ರಶೇಖರ್ ಆಜಾದ್
4) ಆಜಾದ್ ಹಿಂದ್ ಫೌಜ್

ಉತ್ತರ:- ಚಂದ್ರಶೇಖರ್ ಅಜಾದ್

ವಿವರಣೆ:- ಆಜಾದ್‌ಪಾರ್ಕ್ ಉ. ಪ್ರದೇಶದ ಅಲಹಾಬಾನಲ್ಲಿದೆ.ದೊರೆ ಆಲ್ಫ್ರೆಡ್‌ರವರು ಈ ನಗರಕ್ಕೆ ಭೇಟಿ ನೀಡಿದ ಜ್ಞಾಪಕಾರ್ಥವಾಗಿ ಈ ಪಾರ್ಕ್‌ನ್ನು ನಿರ್ಮಿಸಲಾಯಿತು.
ಬ್ರಿಟಿಷ್ ಸಾಮ್ರಾಜ್ಯದಲ್ಲಿ ಇದನ್ನು ಆಲ್ಫ್ರೆಡ್ ಪಾರ್ಕ್ ಎಂದು ಕರೆಯಲಾಗುತ್ತಿತ್ತು. ನಂತರ ಇದನ್ನು ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಆಜಾದ್‌ರವರ ಹೆಸರನ್ನು ಇಡಲಾಯಿತು. ಇದನ್ನು ಕಂಪನಿ ಪಾರ್ಕ್ ಎಂದು ಕೂಡಾ ಕರೆಯುತ್ತಾರೆ.


3)'ಅಕ್ಷಯ ಪಾತ್ರೆ' ಕೆಳಗಿನ ಯಾರ ಮಧ್ಯಾಹ್ನದ ಬಿಸಿ
ಊಟದ ಕಾರ್ಯಕ್ರಮಕ್ಕೆ ಸಂಬಂಧಿಸಿದೆ?


1)ರಾಜೀವ್ ಗಾಂಧಿ ಸಂಸ್ಥೆ
2) ಕರ್ನಾಟಕ ಸರ್ಕಾರ
3)ಸರ್ಕಾರೇತರ ಸಂಸ್ಥೆಗಳು
4) ಇಸ್ಕಾನ್

ಉತ್ತರ:- ಇಸ್ತಾನ್

ವಿವರಣೆ:- ಅಕ್ಷಯ ಪಾತ್ರ ಯೋಜನೆಯನ್ನು ಇಸ್ಕಾನ್
ಫೌಂಡೇಷನ್‌ರವರು ಮಧ್ಯಾಹ್ನದ ಬಿಸಿಯೂಟವನ್ನು
ನೀಡುವ ಯೋಜನೆಯಾಗಿದೆ. ಇದನ್ನು ಅಕ್ಷಯ ಪಾತ್ರೆ
ಫೌಂಡೇಷನ್ ಎಂಬ ಸರ್ಕಾರೇತರ ಸಂಸ್ಥೆಯಾಗಿದೆ.
ಈ ಸಂಘಟನೆಯು 2000 ರಲ್ಲಿ ಆರಂಭವಾಯಿತು.
ಭಕ್ತಿ ವೇದಾಂತ ಪ್ರಭು ಪಾದರು ಈ ಫೌಂಡೇಷನ್‌ನ
ಸಂಸ್ಥಾಪಕರು. ಈ ಸಂಸ್ಥೆಯ ಘೋಷವಾಕ್ಯ Unlim-
ited Food for Education.


4) ಋಗ್ವೇದದಲ್ಲಿ ನಾಲ್ಕು ವರ್ಣಗಳನ್ನು ಕುರಿತು

1) ಕೊನೆಯ ಮಂಡಲದಲ್ಲಿ ತಿಳಿಸಲಾಗಿದೆ.
2) ಎಲ್ಲ ಮಂಡಲಗಳಲ್ಲಿಯು ತಿಳಿಸಲಾಗಿದೆ.
3) ಏನನ್ನೂ ತಿಳಿಸಲಾಗಿಲ್ಲ.
4) ಆರಂಭದ ಭಾಗಗಳಲ್ಲಿ ತಿಳಿಸಲಾಗಿದೆ.

ಉತ್ತರ:- ಕೊನೆಯ ಮಂಡಲದಲ್ಲಿ ೨೪ರಲಾಗಿದೆ.

ವಿವರಣೆ:- ಋಗ್ಗೇದದಲ್ಲಿ ಸಮಾಜದಲ್ಲಿ ಇದ್ದು ನಾಲ್ಕು
ವರ್ಣಗಳಾದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಶೂದ್ರ ಎಂಬ
ನಾಲ್ಕು ವರ್ಣವ್ಯವಸ್ಥೆಯಿತ್ತು. ಇದರ ಬಗ್ಗೆ 10ನೇ
ಮಂಡಲವಾದ ಪುರುಷ ಸೂಕ್ತ ಎಂಬ ಮಂಡಲದಲ್ಲಿ
ತಿಳಿಸಲಾಗಿದೆ.


5) ಕುಶಾನರು

1) ಭಾರತೀಯ ಮೂಲದವರು.
2) ಮಧ್ಯ ಏಶಿಯಾಮೂಲದವರು.
3) ಇಂಡೋ-ಗ್ರೀಕ್ ಮೂಲದವರು
4) ಪರ್ಶಿಯನ್ ಮೂಲದವರು.

ಉತ್ತರ:- ಮಧ್ಯ ಏಶಿಯಾಮೂಲದವರು

ವಿವರಣೆ:- ಕುಶಾನರು ಮೂಲತಃ ಯೂಚಿ ಪಂಗಡಕ್ಕೆ ಸೇರಿದವರಾಗಿದ್ದು ಮಧ್ಯಾ ಏಷಿಯಾದಕ್ಕೆ ಸೇರಿದವರಾಗಿದ್ದಾರೆ.



6) 'ಗಂಗೈಕೊಂಡ ಚೋಳಪುರಂ' ಎಂಬ ರಾಜಧಾನಿಯ
ಹೆಸರು ಹೇಗೆ ಬಂದಿತು?


1) ಚೋಳರನ್ನು ಗಂಗರು ಸೋಲಿಸಿದರು.
2)ಗಂಗಾ ಕಣಿವೆಯೂ ಸೇರಿದಂತೆ ಉತ್ತರ ಭಾರತವನ್ನು ಚೋಳರು ಜಯಿಸಿದ್ದರಿಂದ,
3)ಗಂಗಾ ನದಿ ಪ್ರದೇಶದ ರಾಜರು ಚೋಳರ ಪ್ರಭುತ್ವಕ್ಕೆ ಮನ್ನಣೆ ನೀಡಿದ್ದರಿಂದ.
4)ಚೋಳರು ಗಂಗರನ್ನು ಸೋಲಿಸಿದ್ದರಿಂದ.

ಉತ್ತರ:-ಗಂಗಾ ಕಣಿವೆಯೂ ಸೇರಿದಂತೆ ಉತ್ತರ ಭಾರತವನ್ನು ಚೋಳರು ಜಯಿಸಿದ್ದರಿಂದ.

ವಿವರಣೆ:- 1 ನೇ ರಾಜೇಂದ್ರ ಚೋಳನು ಗಂಗಾ ನದಿ
ಬಯಲಿನಲ್ಲಿ ದಂಡಯಾತ್ರೆ ಕೈಗೊಂಡಿದ್ದನು. ಉ.ಭಾರತದ ಸವಿನೆನಪಿಗಾಗಿ ಗಂಗೈಕೊಂಡ ಎಂಬ ಬಿರುದು ಗಳಿಸಿದನು. ಮತ್ತು ಗಂಗೈಕೊಂಡ, ಚೋಳಪುರಂ ಎಂಬ ಹೊಸ ರಾಜಧಾನಿ ನಿರ್ಮಿಸಿದನು. ಗಂಗೈ-ಕೊಂಡ ಚೋಳಪುರಂ ನಲ್ಲಿ ಭವ್ಯವಾದ ಚೋಳೇಶ್ವರದೇವಾಲಯವನ್ನು ಕಟ್ಟಿಸಿದನು.
🔶️🌷🔶️

7) ಯಾವ ರಾಜನನ್ನು 'ವೈರುಧಗಳ ಮಿಶ್ರಣ' ಎಂದು
ಕರೆಯಲಾಗುತ್ತಿತ್ತು?


1)ಹುಮಾಯೂನ್
2) ಅಕ್ಟರ್‌
3)ಔರಂಗಜೇಬ್
4)ಮೊಹಮದ್ ಬಿನ್ ತುಘಲಕ್.

ಉತ್ತರ:- ಮೊಹಮದ್ ಬಿನ್ ತುಘಲಕ್

ವಿವರಣೆ:- ಮಹಮ್ಮದ್ ಬಿನ್ ತುಘಲಕ್‌ನು ವ್ಯಕ್ತಪಡಿಸಿದ
ವಿಚಾರಗಳು ಅವನ ಕಾಲದ ಜನತೆಯ ಕಲ್ಪನೆಗೆ ನಿಲುಕದಂತಹ ವಿಚಾರಗಳಾಗಿದ್ದವು.ಇವನದು ಮಹೋದ್ದೇಶಗಳ ಸ್ವಯಂ ಪರಾಭವ ದುರಂತ, ಮುಗಿಲೆತ್ತರದ ಆಶೋತ್ತರ ನೆಲ ಕಚ್ಚಿದ ಸಾಧನೆಯಂತಿತ್ತು. ತಾಳ್ಮೆ ಪ್ರಮಾಣ ಜ್ಞಾನವಿಲ್ಲದೆ ವಿಫಲನಾದ ವ್ಯಕ್ತಿಯಾಗಿದ್ದನು. ಆದ್ದರಿಂದ ಈತನನ್ನು ವೈರುಧಗಳ ಮಿಶ್ರಣ ಎಂದು ಕರೆಯಲಾಗುತ್ತಿತ್ತು.


8) ಭಾರತೀಯ ಸಂವಿಧಾನದ ಪ್ರಸ್ಥಾವನೆಗೆ 1976 ರಲ್ಲಿ
ಕೆಳಗಿನ ಯಾವ ಲಕ್ಷಣವನ್ನು ಸೇರಿಸಲಾಯಿತು?


1) ಜಾತ್ಯಾತೀತ
2)ಪ್ರಜಾಸತ್ತಾತ್ಮಕ
3)ಗಣರಾಜ್ಯ
4)ಸಾರ್ವಭೌಮ

ಉತ್ತರ: ಜಾತ್ಯಾತೀತ

ವಿವರಣೆ:- ಸಂವಿಧಾನದ 42ನೇ ತಿದ್ದುಪಡಿ 1976ರಲ್ಲಿ
ಜಾತ್ಯಾತೀತ, ಸಮಾಜವಾದಿ, ಮತ್ತು ಐಕ್ಯತೆ ಎಂಬ
ಪದಗಳನ್ನು ಸೇರ್ಪಡೆ ಮಾಡಲಾಯಿತು.


9) ಈ ಕೆಳಕಂಡ ಯಾವ ಆಧಾರದ ಮೇಲೆ ಭಾರತದ ಎಲೆಗಳ ನಡುವೆ ತಾರತಮ್ಯ ಮಾಡುವುದನ್ನು ಭಾರತೀಯ ಸಂವಿಧಾನ ನಿಷೇಧಿಸುತ್ತದೆ?

1)ಕೇವಲ ಧರ್ಮ,ಜಾತಿ ಮತ್ತು ಲಿಂಗ
2) ಕೇವಲ ಧರ್ಮ, ಜನಾಂಗ .ಜಾತಿ ಮತ್ತು ಲಿಂಗ
3)ಕೇವಲ ಧರ್ಮ,ಜನಾಂಗ, ಜಾತಿ , ಲಿಂಗ ಮತ್ತು ಹುಟ್ಟಿದ ಸ್ಥಳ
4)ಕೇವಲ ಧರ್ಮ ಮತ್ತು ಲಿಂಗ.

ಉತ್ತರ:- ಕೇವಲ ಧರ್ಮ,ಜನಾಂಗ, ಜಾತಿ , ಅಂಗ ಮತ್ತು
ಮಟ್ಟದ ಸ್ಥಳ

ವಿವರಣೆ:- ಸಂವಿಧಾನದ 15ನೇ ವಿಧಿಯಲ್ಲಿ ಲಿಂಗ, ಜಾತಿ,
ಧರ್ಮ, ಜನಾಂಗ, ಜನ್ಮ ಸ್ಥಳದ ಮೇಲೆ ತಾರತಮ್ಯ
ಮಾಡಬಾರದೆಂದು ಸಮಾನತೆಯ ಹಕ್ಕು ತಿಳಿಸುತ್ತದೆ.


10) ಕೆಳಗಿನವುಗಳಲ್ಲಿ ಯಾವುದು ಸಂವಿಧಾನಾತ್ಮಕ ಪ್ರಾಧಿಕಾರ ಅಲ್ಲ?

1)ಹಣಕಾಸು ಆಯೋಗ
2) ಕೇಂದ್ರ ಲೋಕ ಸೇವಾ ಆಯೋಗ
3)ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ.
4)ಯೋಜನಾ ಆಯೋಗ

ಉತ್ತರ:- ಯೋಜನಾ ಆಯೋಗ

ವಿವರಣೆ:- ಹಣಕಾಸು ಆಯೋಗವನ್ನು ಸಂವಿಧಾನದ 280ನೇ
ವಿಧಿಯನ್ವಯ ಸ್ಥಾಪಿಸಲಾಗಿದೆ. ಸಂವಿಧಾನದ 315ನೇ
ವಿಧಿಯನ್ವಯ ಕೇಂದ್ರ ಲೋಕಸೇವಾ ಆಯೋಗ ಸ್ಥಾಪಿಸಲಾಗಿದೆ. 338ನೇ ವಿಧಿ ಯನ್ವಯ ರಾಷ್ಟ್ರೀಯ
ಪರಿಶಿಷ್ಟ ಜಾತಿಗಳ ಆಯೋಗ ಸ್ಥಾಪನೆ, ಯೋಜನಾ
ಆಯೋಗಕ್ಕೆ ಸಂವಿಧಾನಾತ್ಮಕವಾಗಿ ಸ್ಥಾಪನೆಯಾಗಿಲ್ಲ.
ಇದೊಂದು ಸಲಹಾ ಸಮಿತಿಯಾಗಿದೆ. ಪ್ರಸ್ತುತವಾಗಿ
ಯೋಜನಾ ಆಯೋಗದ ಬದಲಿಗೆ ನೀತಿ ಆಯೋಗವನ್ನು ಸ್ಥಾಪಿಸಲಾಗಿದೆ.

Also Read/ಇವುಗಳನ್ನು ಓದಿ,ಓದಲು ಲಿಂಕ್ ಮೇಲೆ ಕ್ಲಿಕ್ಕಿಸಿ👇👌

💥 09-11-2021 Daily Top 10 GK Question Answers With Explanations,Useful For All KPSC Exams


💥 10-11-2021 Daily Top 10 GK Question Answers With Explanations,Useful For All KPSC Exams


💥11-11-2021 Daily Top 10 GK Question Answers With Explanations,Useful For All KPSC Exams


💥12-11-2021 Daily Top 10 GK Question Answers With Explanations,Useful For All KPSC Exams


💥 13-11-2021 Daily Top 10 GK Question Answers With Explanations,Useful For All KPSC Exams

🔶️🔰🔶️




Post a Comment

0 Comments

Social Science Quizzes For all Competitive Exams Part-125/ಸಮಾಜ ವಿಜ್ಞಾನ ರಸಪ್ರಶ್ನೆಗಳು
[PDF] ಎಸ್.ಎಲ್.ಭೈರಪ್ಪ ಅವರ ಗೃಹಭಂಗ ಕಾದಂಬರಿ PDF
ಆಧುನಿಕ ಭಾರತದ ಇತಿಹಾಸ ಪ್ರಶ್ನೋತ್ತರಗಳು/Modern Indian History Questions and Answers Part-3
GPSTR Social Science Descriptive Question Answers PDF/ ಸಮಾಜ ವಿಜ್ಞಾನ ವಿವರಣಾತ್ಮಕ ಪ್ರಶ್ನೋತ್ತರಗಳು
Social Science Quizzes For all Competitive Exams Part-122/ಸಮಾಜ ವಿಜ್ಞಾನ ರಸಪ್ರಶ್ನೆಗಳು
[PDF] ಶೈಕ್ಷಣಿಕ ಮನೋವಿಜ್ಞಾನ ವಾಮದೇವಪ್ಪ ರವರ ಪುಸ್ತಕ ಆಧಾರಿತ ಮನೋವಿಜ್ಞಾನ ಕೈ ಬರಹದ ನೋಟ್ಸ್ PDF
KARTET Educational Psychology Quiz Series-01/ಕರ್ನಾಟಕ ಟಿಇಟಿ ಶೈಕ್ಷಣಿಕ ಮನೋವಿಜ್ಞಾನ ಕ್ವಿಜ್ ಸರಣಿ-01
Social Science Quizzes For all Competitive Exams Part-126/ಸಮಾಜ ವಿಜ್ಞಾನ ರಸಪ್ರಶ್ನೆಗಳು
ಆಧುನಿಕ ಭಾರತ ಇತಿಹಾಸ ಸಂಪೂರ್ಣ ಗಾಂಧಿಯುಗ ಮೈಂಡ್ ಮ್ಯಾಪಿಂಗ್ ನೋಟ್ಸ್ ಪಿಡಿಎಫ್/History of Modern India Quick Revision Series PDF
Social Science Quizzes For all Competitive Exams Part-123/ಸಮಾಜ ವಿಜ್ಞಾನ ರಸಪ್ರಶ್ನೆಗಳು

Important PDF Notes

Ad Code