Ad Code

Ticker

6/recent/ticker-posts

Click Below Image to Join Our Telegram For Latest Updates

FDA/SDA/PDO/General knowledge Top-10 Question Answers With Explanations For Competitive Exams

 FDA/SDA/PDO General knowledge 

16-11-2021 Top-10  Question Answers With Explanations For Competitive Exams 

FDA/SDA/PDO/D.Ed/B.Ed General knowledge Top-10  Question Answers With Explanations For Competitive Exams

ಹಾಯ್ ಸ್ಪರ್ಧಾ ಮಿತ್ರರಿಗೆಲ್ಲ ನಮಸ್ಕಾರಗಳು....!! ಚಾಣಕ್ಯ ಕಣಜ ವೆಬ್ ತಾಣಕ್ಕೆ ತಮಗೆಲ್ಲ ಆತ್ಮೀಯ ಸ್ವಾಗತ. 

ಆತ್ಮೀಯ ಸ್ಪರ್ಧಾರ್ಥಿಗಳೇ ನಿಮ್ಮ ಮುಂದೆ SDA,FDA,PDO,UPSC, RRB, KPSC,SSC
ಸಾವಿರಾರು ಹುದ್ದೆಗಳಿವೆ, ಆತ್ಮ ವಿಶ್ವಾಸದಿಂದ ಮುನ್ನಡೆದರೆ ಯಶಸ್ಸು ಸಾಧಿಸಬಹುದು, ಕೀಳರಿಮೆ ಹೊಂದಬೇಡಿ, ಶ್ರದ್ಧೆ, ಶ್ರಮದಿಂದ ಮುನ್ನಡೆದರೆ ಯಶಸ್ಸು ನಿಮ್ಮದಾಗುತ್ತದೆ.

ಚಾಣಕ್ಯ ಕಣಜ ಟೀಮ್ ಇಂದು ಸ್ಪರ್ಧಾತ್ಮಕ ಪರೀಕ್ಷೆಯ ಸಾಮಾನ್ಯ ಜ್ಞಾನ ಪತ್ರಿಕೆಯ ಅಂಶಗಳಾದ ಸಾಮಾನ್ಯ ಜ್ಞಾನವು ಅಂತರಾಷ್ಟ್ರೀಯ ವಿದ್ಯಮಾನ, ಭಾರತದ ಸಂವಿಧಾನವು, ಸಾಮಾನ್ಯ ವಿಜ್ಞಾನ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ, ಕಲೆ ಮತ್ತು ಸಂಸ್ಕೃತಿ, ಇತಿಹಾಸ, ಕಂಪ್ಯೂಟರ್ ಸಾಕ್ಷರತೆ,
ಪ್ರಚಲಿತ ಘಟನೆಗಳನ್ನು ಒಳಗೊಂಡ ಟಾಪ್ 10 ವಿವರಣೆ ಸಹಿತ ಪ್ರಮುಖ ಪ್ರಶ್ನೋತ್ತರಗಳನ್ನ  ಅಪ್ಡೇಟ್ ಮಾಡುತ್ತಿದೆ. ನೋಟ್ಸ್ ಮಾಡಿಕೊಳ್ಳಿ. ಸ್ಪರ್ಧಾರ್ಥಿಗಳೇ ಎಸ್‌ಡಿಎ, ಎಫ್ಡಿಎ,ಪಿ.ಎಸ್.ಐ., ಕೆ.ಎ.ಎಸ್., ಪಿ.ಡಿ.ಒ ದಂತಹ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗೂ ಉಪಯುಕ್ತವಾಗಲಿದೆ.

🔷️💥🔷️

16-11-2021 Top-10  Question Answers With Explanations For Competitive Exams 


01) ಕೆಳಗಿನ ಯಾವುದನ್ನು ಕಂಪ್ಯೂಟರ್ ಸಾಫ್ಟ್ವೇರ್ ಎಂದು
ವರ್ಗೀಕರಿಸಬಹುದು? ಸರಿಯಾದ ಸಂಯೋಜನೆಯನ್ನು ಗುರುತಿಸಿ ಕೊಟ್ಟಿರುವ ಸಂಕೇತಗಳಿಂದ ಸರಿ ಉತ್ತರವನ್ನು ಆಯ್ಕೆ ಮಾಡಿ

ಅ) C++
ಆ)ಸಿ.ಡಿ. ರೋಮ್
ಇ) ಕಂಪೈಲರ್
ಈ)ಮೌಸ್
ಉ) ಯು.ಪಿ.ಎಸ್
ಊ)ವಿಂಡೋಸ್ XP

1)ಅ,ಇ ಮತ್ತು ಉ ಮಾತ್ರ
2)ಇ, ಈ,ಮತ್ತು ಉ ಮಾತ್ರ
3)ಅ, ಇ,ಮತ್ತು ಊ ಮಾತ್ರ
4)ಆ,ಉ, ಮತ್ತು ಊ ಮಾತ್ರ

ಉತ್ತರ:- ಅ, ಇ, ಮತ್ತು ಊ ಮಾತ್ರ

ವಿವರಣೆ:- C++, ಕಂಪೈಲರ್, ವಿಂಡೋಸ್‌ ಎಕ್ಸ್‌ಪಿ ಇವು
ಕಂಪ್ಯೂಟರ್‌ನ ಸಾಫ್ಟ್‌ವೇರ್‌ಗಳಾಗಿವೆ. ಸಿ.ಡಿ. ರೋಮ್,
ಮೌಸ್, ಯು.ಪಿ.ಎಸ್ ಹಾರ್ಡ್‌ವೇರ್‌ಗಳಾಗಿವೆ.


02) ಪರಮಾಣುವಿನ ರಾಸಾಯನಿಕ ವರ್ತನೆಯು ಯಾವುದನ್ನು ಅವಲಂಬಿಸಿರುತ್ತದೆ?

1)ನ್ಯೂಕ್ಲಿಯಾಸ್‌ನಲ್ಲಿರುವ ಪ್ರೋಟಾನ್‌ಗಳ ಸಂಖ್ಯೆ
2)ಅದರ ದ್ರವ್ಯರಾಶಿಯ ಸಂಖ್ಯೆ
3)ನ್ಯೂಕ್ಲಿಯಸ್‌ನ್ನು ಸುತ್ತುತ್ತಿರುವ ಎಲೆಕ್ಟ್ರಾನ್‌ಗಳ ಸಂಖ್ಯೆ.
4)ನ್ಯೂಕ್ಲಿಯಸ್‌ನಲ್ಲಿರುವ ನ್ಯೂಟ್ರಾನ್ ಗಳ ಸಂಖ್ಯೆ.

ಉತ್ತರ:- ನ್ಯೂಕ್ಲಿಯಸ್‌ನ್ನು ಸುತ್ತುತ್ತಿರುವ ಎಲೆಕ್ಟ್ರಾನ್‌ಗಳ
ಸಂಖ್ಯೆ

ವಿವರಣೆ:- ಪರಮಾಣುವಿನ ಬೀಜದಲ್ಲಿ ಪ್ರೋಟಾನ್
ಮತ್ತು ನ್ಯೂಟ್ರಾನ್‌ಗಳಿರುತ್ತವೆ. ಬೀಜದ ಸುತ್ತಲೂ
ಎಲೆಕ್ಟ್ರಾನ್ಸ್‌ಗಳು ಸುತ್ತುತ್ತಿರುತ್ತವೆ.ಎಲೆಕ್ಟ್ರಾನ್‌ಗಳು
ವಿವಿಧ ಕಕ್ಷೆಯಲ್ಲಿ ಸುತ್ತುತ್ತಿದ್ದು, ಅವುಗಳ ಸಂಖ್ಯೆಯನ್ನು
ಆಧರಿಸಿ, ಪರಮಾಣುವಿನ ರಾಸಾಯನಿಕ ಕ್ರಿಯೆಯು
ನಡೆಯುತ್ತದೆ.


03) ಶಕ್ತಿ ಸಂರಕ್ಷಣೆ ಎಂದರೆ,

1) ಶಕ್ಕಿಂತನ್ನು ಸೃಷ್ಟಿಸಬಹುದು, ಆದರೆ ವಿನಾಶ ಗೊಳಿಸಲಾಗದು ಎಂದರ್ಥ
2) ಶಕ್ತಿಯನ್ನು ಸೃಷ್ಟಿಸಲಾಗದು ಆದರೆ ವಿನಾಶ ಗೊಳಿಸಬಹುದು ಎಂದರ್ಥ
3) ಶಕ್ತಿಯನ್ನು ಸೃಷ್ಟಿಸುವುದಾಗಲಿ ವಿನಾಶ ಗೊಳಿಸುವುದಾಗಲಿ
ಸಾಧ್ಯವಿಲ್ಲ ಎಂದರ್ಥ.
4) ಶಕ್ತಿಯನ್ನು ಸೃಷ್ಟಿಸಬಹುದು ಹಾಗೆಯೇ ಅದನ್ನು ವಿನಾಶ
ಮಾಡಬಹುದು ಎಂದರ್ಥ.

ಉತ್ತರ- ಶಕ್ತಿಯನ್ನು ಶಕ್ತಿಯನ್ನು ಸೃಷ್ಟಿಸುವುದಾಗಲಿ ವಿನಾಶ
ಗೊಳಿಸುವುದಾಗಲಿ ಸಾಧ್ಯವಿಲ್ಲ ಎಂದರ್ಥ

ವಿವರಣೆ:- ಶಕ್ತಿಯು ಒಂದು ರೂಪದಿಂದ ಮತ್ತೊಂದು
ರೂಪಕ್ಕೆ ಬದಲಾಗುತ್ತದೆ. ಅದನ್ನು ನಾಶ ಮಾಡಲು
ಸಾಧ್ಯವಿಲ್ಲ. ಮತ್ತು ಸೃಷ್ಟಿಸಲು ಸಾಧ್ಯವಿಲ್ಲ.


04) ಶಾಯಿಯನ್ನು ಬ್ಲಾಟಿಂಗ್ ಕಾಗದವು ಎಷ್ಟರಮಟ್ಟಿಗೆ
ಹೀರಿಕೊಳ್ಳುತ್ತದೆ ಎಂಬುದು.

1) ಲೋಮನಾಳಕ್ರಿಯೆಯ ತತ್ವವನ್ನು ಅವಲಂಬಿಸಿದೆ.
2)ಬ್ಲಾಟಿಂಗ್ ಕಾಗದದ ಮೂಲಕ ಶಾಯಿಯ ವಿಸರಣವನ್ನು ಅವಲಂಬಿಸಿದೆ.
3)ಸೈಫನ್ ಕ್ರಿಯೆಯನ್ನು ಅವಲಂಬಿಸಿದೆ.
4)ಶಾಯಿಯ ಸ್ನಿಗ್ಧತೆಯನ್ನು ಅವಲಂಬಿಸಿದೆ.

ಉತ್ತರ:- ಲೋಮನಾಳಕ್ರಿಯೆಯ ತತ್ವವನ್ನು ಅವಲಂಬಿಸಿದೆ.

ವಿವರಣೆ:- ಬ್ಲಾಟಿಂಗ್ ಕಾಗದಗಳಲ್ಲಿ ಸಣ್ಣ ಸಣ್ಣ ರಂಧ್ರಗಳಿದ್ದು,
ಇದು ಇಂಕ್‌ನ್ನು ಹೀರಿಕೊಳ್ಳಲು ಸುಲಭವಾಗುತ್ತದೆ.ಇದರಲ್ಲಿ ಲೋಮನಾಳ ಕ್ರಿಯೆಯ ತತ್ವವನ್ನು ಅವಲಂಬಿಸಿ ಇಂಕ್ ಮೇಲೇರುತ್ತದೆ. ಪೌಂಟೆನ್ ಪೆನ್‌ನಲ್ಲಿಯೂ ಕೂಡ ಇಂಕ್ ಲೋಮನಾಳ ಕ್ರಿಯೆ ತತ್ವವು ಅಳವಡಿಸಿದೆ.


05) ಕ್ಯಾಬಿನೆಟ್ ಅಥವಾ ಸಚಿವ ಸಂಪುಟ ಎಂಬುದು

1)ಮಂತ್ರಿ ಮಂಡಲಕ್ಕಿಂತ ಸಣ್ಣದಾದ ಕೂಟ
2)ಮಂತ್ರಿ ಮಂಡಲಕ್ಕಿಂತ ದೊಡ್ಡದಾದ ಕೂಟ
3)ಮಂತ್ರಿ ಮಂಡಲ
4) ಸಚಿವ ಸಂಪುಟ ಮತ್ತು ಲೋಕಸಭೆಯ ಪ್ರಧಾನ
ಕಾರ್ಯದರ್ಶಿ ಯನ್ನೊಳಗೊಂಡಿದೆ.

ಉತ್ತರ:- ಮಂತ್ರಿ ಮಂಡಲಕ್ಕಿಂತ ಸಣ್ಣದಾದ ಕೂಟ

ವಿವರಣೆ:- ಭಾರತವು ಬ್ರಿಟಿಷ್ ಮಾದರಿಯ ಕ್ಯಾಬಿನೆಟ್
ಪದ್ದತಿಯನ್ನು ಹೋಲುತ್ತದೆ. ಕೇಂದ್ರ ಸರ್ಕಾರದ ಪ್ರತಿಯೊಂದು ನಿರ್ಧಾರ, ನಿರ್ವಹಣೆ, ಎಲ್ಲವೂ ಸಚಿವ ಸಂಪುಟವನ್ನು ಅವಲಂಬಿಸಿದೆ. ಈ ಸಚಿವ ಸಂಪುಟದ ಮುಖ್ಯಸ್ಥರಾಗಿ ಪ್ರಧಾನಮಂತ್ರಿಗಳು.


06) ಸಂವಿಧಾನದ ಪ್ರಕಾರ ರಾಜ್ಯಪಾಲರು ತನ್ನ ನಡುವಳಿಕೆಗೆ
ಮುಂದೆ ಕಾಣಿಸಿದ ಒಬ್ಬರಿಗೆ ಜವಾಬ್ದಾರರಾಗಿರುತ್ತಾರೆ?

1) ಪ್ರಧಾನ ಮಂತ್ರಿ
2)ರಾಷ್ಟ್ರಪತಿ
3)ರಾಜ್ಯದ ಮುಖ್ಯಮಂತ್ರಿ
4) ಉಪರಾಷ್ಟ್ರಪತಿ

ಉತ್ತರ:- ರಾಷ್ಟ್ರಪತಿ

ವಿವರಣೆ:- ಕೇಂದ್ರದಲ್ಲಿ ರಾಷ್ಟ್ರಪತಿಯಂತೆಯೇ ರಾಜ್ಯದಲ್ಲಿ
ರಾಜ್ಯಪಾಲರು ರಾಜ್ಯದ ಮುಖ್ಯಸ್ಥರಾಗಿರುತ್ತಾರೆ. ರಾಜ್ಯದ
ಎಲ್ಲಾ ಕಾರ್ಯಾಂಗೀಯ ಕೆಲಸ ಕಾರ್ಯಗಳು ಇವರ
ಹೆಸರಿನಲ್ಲಿ ನಡೆಯುತ್ತವೆ.



07) ರಾಷ್ಟ್ರಪತಿಯವರಿಗೆ ಯಾರು ಪ್ರಮಾಣ ವಚನವನ್ನು
ವಿಧಿವತ್ತಾಗಿ ಬೋಧಿಸುತ್ತಾರೆ?

1) ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು
2)ಉಪರಾಷ್ಟ್ರಪತಿ
3)ಪ್ರಧಾನ ಮಂತ್ರಿ
4)ಪ್ರಾಯದಲ್ಲಿ ಅತಿ ಹೆಚ್ಚು ಹಿರಿಯರಾದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು

ಉತ್ತರ:- ಸರ್ವೋಚ್ಚ ನ್ಯಾಯಾಲಯದ ಮುಖ್ಯ
ನ್ಯಾಯಾಧೀಶರು

ವಿವರಣೆ:- ಸಂವಿಧಾನದ 60ನೇ ವಿಧಿಯ ಅನ್ವಯ ರಾಷ್ಟ್ರಪತಿಯವರಿಗೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಪ್ರಮಾಣ ವಚನ ಬೋಧಿಸುತ್ತಾರೆ. ಮುಖ್ಯ ನ್ಯಾಯಾಧೀಶರ ಅನುಪಸ್ಥಿತಿಯಲ್ಲಿ ಸುಪ್ರಿಕೋರ್ಟಿನ ಹಿರಿಯ ನ್ಯಾಯಾಧೀಶರು ಪ್ರಮಾಣ ವಚನ ಬೋಧಿಸುವರು.


08) ಕ್ಷಮದಾನ ನೀಡುವ ರಾಷ್ಟ್ರಪತಿಯ ಅಧಿಕಾರವನ್ನು
ಸಂವಿಧಾನದ ಈ ಮುಂದಿನ ಯಾವ ಅನುಚ್ಛೇದ
ಒಳಗೊಂಡಿದೆ?

1) ಅನುಚ್ಛೇದ 73
2) ಅನುಚ್ಛೇದ 72
3) ಅನುಚ್ಛೇದ 75
4) ಅನುಚ್ಛೇದ 78

ಉತ್ತರ:- ಅನುಚ್ಛೇದ 72

ವಿವರಣೆ:- ಅಪರಾಧಿಯೆಂದು ತೀರ್ಮಾನವಾದ ನಂತರ
ಅಂತಹ ಅಪರಾಧಿಗೆ ಸೇನಾ ನ್ಯಾಯಾಲಯವು ವಿಧಿಸಿದ
ದಂಡನೆ ಅಥವಾ ಯಾವುದೇ ನ್ಯಾಯಾಲಯವು ನೀಡಿರುವ ಶಿಕ್ಷೆ ಅಥವಾ ಮರಣದಂಡನೆ ಶಿಕ್ಷೆಯನ್ನು ಅಮಾನತುಗೊಳಿಸುವ,ಕ್ಷಮಾದಾನ ನೀಡುವ, ಮುಂದೂಡುವ ಅಥವಾ ವಜಾ ಮಾಡುವ ಅಥವಾ ಬೇರೊಂದು ಶಿಕ್ಷೆಗೆ ಪರಿವರ್ತಿಸುವ ಅಧಿಕಾರವನ್ನು ರಾಷ್ಟ್ರಪತಿಯವರು ಹೊಂದಿರುತ್ತಾರೆ ಎಂದು
ಸಂವಿಧಾನದ 72ನೇ ಅನುಚ್ಛೇದ ತಿಳಿಸುತ್ತದೆ.


09) ಮೌರ್ಯರ ಮತ್ತು ಗುಪ್ತರ ರಾಜಧಾನಿಯಾಗಿದ್ದ
ಪಾಟಲೀಪುತ್ರವನ್ನು ಈಗ ಹೀಗೆ ಕರೆಯುತ್ತಾರೆ.

1)ಪಾಟ್ನ
2) ಅಲಹಾಬಾದ್
3)ಪುರಿ
4) ದೆಹಲಿ

ಉತ್ತರ: ಪಾಟ್ನ

ವಿವರಣೆ:- ಪಾಟ್ನವು ಪ್ರಸ್ತುತವಾಗಿ ಬಿಹಾರದ ರಾಜಧಾನಿ.
ಪ್ರಾಚೀನ ಕಾಲದಲ್ಲಿ ಇದನ್ನು ಪಾಟಲೀಪುತ್ರ ಎಂದು
ಕರೆಯುತ್ತಿದ್ದರು. ಬಿಹಾರದ ದೊಡ್ಡ ನಗರ ಮತ್ತು ಮೌರ್ಯರು, ಗುಪ್ತರು. ನಂದರು, ಪಾಲ ದೊರೆಗಳ ರಾಜಧಾನಿಯಾಗಿತ್ತು. ಇದನ್ನು ಮಗಧ ದೊರೆ ಪ್ರಾಚೀನ ಪಾಟಲೀಪತ್ರವನ್ನು ಕಟ್ಟಿಸಿದನು. ಇದು ಗಂಗಾನದಿಯ ದಡದಲ್ಲಿದೆ. ಇಲ್ಲಿ ಸಿಖ್‌ರ 10ನೇಗುರು ಗುರು ಗೋವಿಂದ ಸಿಂಗ್ ಜನಿಸಿದ ಸ್ಥಳವಾಗಿದೆ.


10) ಮೊದಲನೇ ಚಂದ್ರಗುಪ್ತ ಯಾವ ರಾಜವಂಶದ ಪ್ರಮುಖ
ರಾಜನಾಗಿದ್ದ?

1)ಗುಪ್ತ
2)ಮೌರ್ಯರು
3)ಶಕರು
4)ಶಾತವಾಹನರು

ಉತ್ತರ:- ಗುಪ್ತ

ವಿವರಣೆ:- ಮೊದಲನೇ ಚಂದ್ರಗುಪ್ತನು ಗುಪ್ತ ಸಾಮ್ರಾಜ್ಯದ
ಸ್ಥಾಪಕನಾದ ಶ್ರೀ ಗುಪ್ತನ ಮೊಮ್ಮಗ, ಮೊದಲನೇ
ಚಂದ್ರಗುಪ್ತನಿಗೆ "ಮಹಾರಾಜಾಧಿರಾಜ" ಎಂಬ ಬಿರುದಿತ್ತು. ಇವನು ಕ್ರಿ.ಶ. 320 ರಿಂದ 335 ರವರೆಗೆ ಆಳ್ವಿಕೆ ನಡೆಸಿದನು. ಲಿಚ್ಛವಿ ಮನೆತನದ ಕುಮಾರದೇವಿಯನ್ನು ವಿವಾಹವಾಗಿದ್ದನು. ಇವನು ಹೊರಡಿಸಿದ ಚಿನ್ನದ ನಾಣ್ಯಗಳ ಮೇಲೆ ಚಂದ್ರಗುಪ್ತ ಕುಮಾರದೇವಿ ಲಿಚ್ಛವಿಯಾ ಎಂಬ ಪದವನ್ನು ಠಂಕಿಸಿದನು.

🔷️🌷🔷️

Also Read/ಇವುಗಳನ್ನು ಓದಿ,ಓದಲು ಲಿಂಕ್ ಮೇಲೆ ಕ್ಲಿಕ್ಕಿಸಿ👇👌

💥 09-11-2021 Daily Top 10 GK Question Answers With Explanations,Useful For All KPSC Exams


💥 10-11-2021 Daily Top 10 GK Question Answers With Explanations,Useful For All KPSC Exams


💥11-11-2021 Daily Top 10 GK Question Answers With Explanations,Useful For All KPSC Exams


💥12-11-2021 Daily Top 10 GK Question Answers With Explanations,Useful For All KPSC Exams


💥 13-11-2021 Daily Top 10 GK Question Answers With Explanations,Useful For All KPSC Exams


💥 14-11-2021 Daily Top 10 GK Question Answers With Explanations,Useful For All KPSC Exams


💥 15-11-2021 Daily Top 10 GK Question Answers With Explanations,Useful For All KPSC Exams

🔶️💥🔶️



Post a Comment

0 Comments

HSTR Previous Year Question Papers PDF/HSTR ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳ ಪಿಡಿಎಫ್
[PDF] ಕಂಪ್ಯೂಟರ್ ಕೈಪಿಡಿ ನೋಟ್ಸ್ ಕನ್ನಡದಲ್ಲಿ ಪಿಡಿಎಫ್/Computer  Notes PDF In Kannada
[PDF] ಶೈಕ್ಷಣಿಕ ಮನೋವಿಜ್ಞಾನ ವಾಮದೇವಪ್ಪ ರವರ ಪುಸ್ತಕ ಆಧಾರಿತ ಮನೋವಿಜ್ಞಾನ ಕೈ ಬರಹದ ನೋಟ್ಸ್ PDF
[PDF] Kannada Grammar. ಸಮಗ್ರ ಕನ್ನಡ ವ್ಯಾಕರಣ. Pdf
Health And Value Education in Kannada PDF For CET/GPSTR Aspirants
Health Education PDF Notes For GPSTR Competitive Exams/ಆರೋಗ್ಯ ಶಿಕ್ಷಣ ಪಿಡಿಎಫ್
[PDF] ಕರ್ನಾಟಕ ಇತಿಹಾಸ,KARNATAKA HISTORY PDF FOR ALL COMPETITIVE EXAMS
[PDF] 6 ರಿಂದ 8 ಪದವಿದರ ಶಿಕ್ಷಕರ ನೇಮಕಾತಿ ಪರೀಕ್ಷೆಗಾಗಿ ಮೌಲ್ಯ ಶಿಕ್ಷಣ ಪಿಡಿಎಫ್ GPSTR ಸ್ಪರ್ಧಾರ್ಥಿಗಳಿಗಾಗಿ
Educational Psychology Quiz Useful for PSTR/GPSTR/HSTR Competitive Exams Part-02/ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಶೈಕ್ಷಣಿಕ ಮನೋವಿಜ್ಞಾನ ರಸಪ್ರಶ್ನೆಗಳು
Social Science Pedagogy Quiz For Karnataka TET Competitive Exam Part-01/ಟಿಇಟಿ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಸಮಾಜ ವಿಜ್ಞಾನ ಬೋಧನಾಶಾಸ್ತ್ರ ಕ್ವಿಜ್ ಭಾಗ-01

Important PDF Notes

Ad Code