Ad Code

Ticker

6/recent/ticker-posts

Click Below Image to Join Our Telegram For Latest Updates

FDA/SDA/PDO/General knowledge Top-10 Question Answers With Explanations For Competitive Exams

 FDA/SDA/PDO General knowledge 

18-11-2021 Top-10  Question Answers With Explanations For Competitive Exams 

FDA/SDA/PDO/D.Ed/B.Ed General knowledge Top-10  Question Answers With Explanations For Competitive Exams


ಹಾಯ್ ಸ್ಪರ್ಧಾ ಮಿತ್ರರಿಗೆಲ್ಲ ನಮಸ್ಕಾರಗಳು....!! ಚಾಣಕ್ಯ ಕಣಜ ವೆಬ್ ತಾಣಕ್ಕೆ ತಮಗೆಲ್ಲ ಆತ್ಮೀಯ ಸ್ವಾಗತ. 

ಆತ್ಮೀಯ ಸ್ಪರ್ಧಾರ್ಥಿಗಳೇ ನಿಮ್ಮ ಮುಂದೆ SDA,FDA,PDO,UPSC, RRB, KPSC,SSC
ಸಾವಿರಾರು ಹುದ್ದೆಗಳಿವೆ, ಆತ್ಮ ವಿಶ್ವಾಸದಿಂದ ಮುನ್ನಡೆದರೆ ಯಶಸ್ಸು ಸಾಧಿಸಬಹುದು, ಕೀಳರಿಮೆ ಹೊಂದಬೇಡಿ, ಶ್ರದ್ಧೆ, ಶ್ರಮದಿಂದ ಮುನ್ನಡೆದರೆ ಯಶಸ್ಸು ನಿಮ್ಮದಾಗುತ್ತದೆ.

ಚಾಣಕ್ಯ ಕಣಜ ಟೀಮ್ ಇಂದು ಸ್ಪರ್ಧಾತ್ಮಕ ಪರೀಕ್ಷೆಯ ಸಾಮಾನ್ಯ ಜ್ಞಾನ ಪತ್ರಿಕೆಯ ಅಂಶಗಳಾದ ಸಾಮಾನ್ಯ ಜ್ಞಾನವು ಅಂತರಾಷ್ಟ್ರೀಯ ವಿದ್ಯಮಾನ, ಭಾರತದ ಸಂವಿಧಾನವು, ಸಾಮಾನ್ಯ ವಿಜ್ಞಾನ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ, ಕಲೆ ಮತ್ತು ಸಂಸ್ಕೃತಿ, ಇತಿಹಾಸ, ಕಂಪ್ಯೂಟರ್ ಸಾಕ್ಷರತೆ,
ಪ್ರಚಲಿತ ಘಟನೆಗಳನ್ನು ಒಳಗೊಂಡ ಟಾಪ್ 10 ವಿವರಣೆ ಸಹಿತ ಪ್ರಮುಖ ಪ್ರಶ್ನೋತ್ತರಗಳನ್ನ  ಅಪ್ಡೇಟ್ ಮಾಡುತ್ತಿದೆ. ನೋಟ್ಸ್ ಮಾಡಿಕೊಳ್ಳಿ. ಸ್ಪರ್ಧಾರ್ಥಿಗಳೇ ಎಸ್‌ಡಿಎ, ಎಫ್ಡಿಎ,ಪಿ.ಎಸ್.ಐ., ಕೆ.ಎ.ಎಸ್., ಪಿ.ಡಿ.ಒ ದಂತಹ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗೂ ಉಪಯುಕ್ತವಾಗಲಿದೆ.

🔷️💥🔷️

18-11-2021 Top-10  Question Answers With Explanations For Competitive Exams


1) ರಾಷ್ಟ್ರಕೂಟರ ರಾಜಧಾನಿಯಾಗಿದ್ದುದು?

1) ಹಂಪಿ
2) ಬಾದಾಮಿ
3) ಮಲ್ ಖೇಡ್
4) ಕಲ್ಯಾಣಿ

ಉತ್ತರ:- ಮಲ್ ಖೇಡ್

ವಿವರಣೆ:-ಪ್ರಸ್ತುತ ಗುಲ್ಬರ್ಗಾ ಜಿಲ್ಲೆಯಲ್ಲಿ ಮಲ್ ಖೇಡ್ ಇದೆ.
ರಾಷ್ಟ್ರಕೂಟರ ಪ್ರಸಿದ್ದ ದೊರೆ ಅಮೋಘವರ್ಷ
ನೃಪತುಂಗ.


2) ತಾಳಿಕೋಟೆ ಕದನ ನಡೆದದ್ದು ಇವರ ನಡುವೆ

1)ಮೊಘಲರು ಮತ್ತು ಅಫ್ಘಾನರು
2) ಚೋಳರು ಮತ್ತು ರಾಷ್ಟ್ರಕೂಟರು
3) ಬಹಮನಿ ಸುಲ್ತಾನರು ಮತ್ತು ವಿಜಯನಗರ
ಸಾಮ್ರಾಜ್ಯದವರು

4)ಚಾಲುಕ್ಯರು ಮತ್ತು ಪಲ್ಲವರು


ಉತ್ತರ:- ಬಹುಮನಿ ಸುಲ್ತಾನರು ಮತ್ತು ವಿಜಯನಗರ
ಸಾಮ್ರಾಜ್ಯದವರು.

ವಿವರಣೆ:- ತಾಳಿಕೋಟೆ ಕದನ/ ರಕ್ಕಸತಂಗಡಿ ಕದನವು
ಕ್ರಿ.ಶ. 1565ರಲ್ಲಿ ಜರುಗಿತು. ವಿಜಯನಗರ ಸಾಮ್ರಾಜ್ಯದ
ಅರಸ ಅಳಿಯ ರಾಮರಾಯ ಮತ್ತು ಬಹುಮನಿ ಸುಲ್ತಾನರ
ನಡುವೆ ಈ ಯುದ್ದ ಜರುಗಿತು. ಈ ಯುದ್ಧದ ಪರಿಣಾಮ
ವಿಜಯನಗರ ಸಾಮ್ರಾಜ್ಯವು ಪತನಗೊಂಡಿತು.


3) ಬ್ರಹ್ಮ ಸಮಾಜದ ಸ್ಥಾಪಕ

1)ಕೇಶವ್ ಚಂದ್ರ ಸೇನ್
2)ಎಮ್.ಎನ್.ರೋಮ್
3)ದೇವೇಂದ್ರ ನಾಥ ಠಾಕೋರ್
4)ರಾಜಾರಾಮ್ ಮೋಹನ್ ರಾಯ್

ಉತ್ತರ:- ರಾಜಾರಾಮ್ ಮೋಹನ್ ರಾಯ್

ವಿವರಣೆ:- ರಾಜಾರಾಮ್ ಮೋಹನ್ ರಾಯ್ ರವರು
1914ರಲ್ಲಿ ಆತ್ಮೀಯ ಸಭಾ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು.ಇದು 1819ರ ವೇಳೆಗೆ ಸ್ಥಗಿತಗೊಂಡಿತು. ನಂತರ 1828ರಲ್ಲಿ ಬ್ರಹ್ಮಸಭಾ ಸ್ಥಾಪಿಸಿದರು. ಅದು 1829ರಲ್ಲಿ ಬ್ರಹ್ಮ ಸಮಾಜ ನಾಮಕರಣವಾಯಿತು. ರಾಜಾರಾಂ ಮೊಹನ್‌ರವರನ್ನು ಗಾಂಧೀಜಿಯವರು “ಭಾರತದ ನವೋದಯ ಪಿತಾಮಹ" ಎಂದು ಕರೆದರು. ರಾಜಾರಾಂ ಮೋಹನ್‌ರಾಯ್‌ರವರು ಸತಿ ಪದ್ದತಿ, ಮೂರ್ತಿಪೂಜೆ,ಬಹುಪತ್ನಿತ್ವ ದಂತಹ ಮೂಢನಂಬಿಕೆಗಳನ್ನು ವಿರೋಧಿಸಿದರು.“ಸಂವಾದಿ ಕೌಮುದಿ” ಪತ್ರಿಕೆಯ ಮೂಲಕ ಸಾಮಾಜಿಕ“ಸುಧಾರಣಾ ಚಳುವಳಿ ಪ್ರಕ್ರಿಯೆಯನ್ನು ಆರಂಭಿಸಿದರು. ಐದು ಉಪನಿಷತ್ತುಗಳನ್ನು ಸಂಸ್ಕೃತದಿಂದ ಬೆಂಗಾಲಿಗೆ ಭಾಷಾಂತರಿಸಿದರು. ಇಂಗ್ಲೀಷ್ ಶಿಕ್ಷಣ ಪ್ರತಿಪಾದಿಸಿದರು.ವೇದಾಂತ ಕಾಲೇಜನ್ನು ಕೂಡಾ ಸ್ಥಾಪಿಸಿದರು. 'ರಾಜಾ'ಎಂಬುದು ರಾಜಾರಾಂ ಮೋಹನ್‌ರಾಯ್‌ರವರಿಗೆ ಮೊಗಲ್ ಬಾದಷಹ 1829ರಲ್ಲಿ ನೀಡಿದ ಬಿರುದಾಗಿತ್ತು.


4) ಮೊದಲ ದುಂಡು ಮೇಜಿನ ಪರಿಷತ್ತು ನಡೆದದ್ದು

1) ಸೆಪ್ಟೆಂಬರ್- ಡಿಸೆಂಬರ್ 1931 ರಲ್ಲಿ
2) ನವಂಬರ್ 1930-ಜನವರಿ 1931ರಲ್ಲಿ
3) ನವಂಬರ್-ಡಿಸೆಂಬರ್ 1932ರಲ್ಲಿ
4) ಮಾರ್ಚ್-ಮೇ 1929 ರಲ್ಲಿ

ಉತ್ತರ:- ನವಂಬರ್ 1930 – ಜನವಲ 1931 ರಲ್ಲಿ

ವಿವರಣೆ:- ಮೊದಲ ದುಂಡು ಮೇಜಿನ ಸಮ್ಮೇಳನವು 1930
ನವೆಂಬರ್ ನಿಂದ ಜನವರಿ 1931ರವರೆಗೆ ಲಂಡನ್‌ನಲ್ಲಿ
ಜರುಗಿತು. ಇದರ ಅಧ್ಯಕ್ಷತೆಯನ್ನು ಬ್ರಿಟನ್ನಿನ ಪ್ರಧಾನಿ ರಾಮ್ಸೆ ಮ್ಯಾಕ್‌ಡೊನಾಲ್ಡ್ ಅಧ್ಯಕ್ಷತೆ ವಹಿಸಿದ್ದರು.ಇದನ್ನು ಲಾರ್ಡ್ ಇರ್ವಿನ್ ರವರು ಅಧಿಕೃತವಾಗಿ ಉದ್ಘಾಟಿಸಿದರು.ಮೂರು ದುಂಡು ಮೇಜಿನ ಸಮ್ಮೇಳನದಲ್ಲೂ ಅಂಬೇಡ್ಕರ್‌ರವರು ಭಾಗವಹಿಸಿದ್ದರು.


5) ಸಿ.ರಾಜ್ ಗೋಪಾಲಾಚಾರಿ ಅವರು

1) ಭಾರತದ ಮೊದಲ ಗವರ್ನರ್ ಜನರಲ್ ಆಗಿದ್ದರು.
2) ಭಾರತದ ಮೊದಲ ಭಾರತೀಯ ಗವರ್ನರ್ ಜನರಲ್ ಆಗಿದ್ದರು
3) ಭಾರತದ ಮೊದಲ ರಾಷ್ಟ್ರಪತಿಯಾಗಿದ್ದರು.
4) ಭಾರತದ ಮೊದಲ ಪ್ರಧಾನಿ ಆಗಿದ್ದರು.

ಉತ್ತರ:- ಭಾರತದ ಮೊದಲ ಭಾರತೀಯ ಗವರ್ನರ್
ಜನರಲ್ ಆಗಿದ್ದರು

ವಿವರಣೆ:- ಸಿ. ರಾಜಗೋಪಾಲಾಚಾರಿಯವರು ಸ್ವತಂತ್ರ
ಭಾರತದ ಮೊದಲ ಭಾರತೀಯ ಜನರಲ್ ಆಗಿದ್ದು 1948 ಜೂನ್ 21 ರಿಂದ ಜನವರಿ 26, 1950 ರವರೆಗೆ ಕಾರ್ಯನಿರ್ವಹಿಸಿದ್ದಾರೆ. ಇವರು ಸ್ವತಂತ್ರ ಭಾರತದ ಕೊನೆಯ ಗವರ್ನರ್ ಜನರಲ್. ನಂತರ ಈ ಹುದ್ದೆ ರದ್ದಾಗಿ ಭಾರತವು ಗಣತಂತ್ರವಾಗಿ ರಾಷ್ಟ್ರಪತಿ ಹುದ್ದೆ ಸೃಷ್ಟಿಯಾಯಿತು.


6) ಮಹಮ್ಮದ್ ಆಲಿ ಜಿನ್ನಾರವರು

1)ಮುಸ್ಲಿಂ ಲೀಗ್‌ನ ಸ್ಥಾಪಕರು
2)ಪಾಕಿಸ್ತಾನದ ಮೊದಲ ಪ್ರಧಾನ ಮಂತ್ರಿ ಆಗಿದ್ದರು,
3)ಪಾಕಿಸ್ತಾನದ ಮೊದಲ ರಾಷ್ಟ್ರಾಧ್ಯಕ್ಷರಾಗಿದ್ದರು.
4)ಪಾಕಿಸ್ತಾನದ ಮೊದಲ ಗವರ್ನರ್ ಜನರಲ್ ಆಗಿದ್ದರು.

ಉತ್ತರ:- ಸಾರಾರದ ಮದಲ ಗವರ್ನರ್ ಜನರಲ್
ಆಗಿದ್ದರು.

ವಿವರಣೆ:- ಮಹಮ್ಮದ್ ಅಲಿ ಜಿನ್ನಾರವರನ್ನು ಪಾಕಿಸ್ತಾನದ
ಪಿತಾಮಹ ಎಂದು ಕರೆಯುತ್ತಾರೆ. ಪಾಕಿಸ್ತಾನವು ಭಾರತದಿಂದ
ವಿಭಜನೆಯಾದ ನಂತರ ಪಾಕಿಸ್ತಾನದ ಮೊದಲ ಗವರ್ನರ್
ಜನರಲ್ ಆಗಿ ಆಗಸ್ಟ್ 14, 1947 ರಿಂದ ಸೆಪ್ಟೆಂಬರ್ 11,
1948 ರವರೆಗೆ ಕಾರ್ಯನಿರ್ವಹಿಸಿದ್ದಾರೆ. ಇವರು ಪಾಕಿಸ್ತಾನ
ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿದ್ದರು.


7) ಬೇಲೂರು ಮತ್ತು ಹಳೇಬೀಡುಗಳಲ್ಲಿ ದೇವಾಲಯಗಳನ್ನು ನಿರ್ಮಿಸಿದವರು.

1)ಹೊಯ್ಸಳರು
2)ಬಾದಾಮಿ ಚಾಲುಕ್ಯರು
3)ಕಲ್ಯಾಣಿಯ ಚಾಲುಕ್ಯರು
4) ಕದಂಬರು

ಉತ್ತರ:- ಹೊಯ್ಸಳರು

ವಿವರಣೆ:-ಹೊಯ್ಸಳರು ಬೇಲೂರಿನಲ್ಲಿ ಚಿನ್ನಕೇಶವ ದೇವಾಲಯ, ಕಪ್ಪೆಚೆನ್ನಿಗರಾಯ, ಮೂಲಸಂಗಮೇಶ್ವರ ದೇವಾಲಯಗಳು, ಹಳೇಬೀಡಿನಲ್ಲಿ ಹೊಯ್ಸಳೇಶ್ವರ,ಕೇದಾರೇಶ್ವರ ದೇವಾಲಯ ಮತ್ತು ಪಾರ್ಶ್ವನಾಥ ಬಸದಿಗಳನ್ನು ಕಟ್ಟಿಸಿದ್ದಾರೆ.


8) ಬಾದಾಮಿಯ ಚಾಲುಕ್ಯರ ರಾಜ್ಯಕ್ಕೆ ಭೇಟಿ ನೀಡಿದ್ದ
ಚೀನೀ ಯಾತ್ರಿಕ


1) ಹೋಚಿಮಿನ್
2)ಫಾಯಿಯಾನ್
3)ಹ್ಯೊಯನ್‌ ತ್ಸಾಂಗ್
4)ಇತ್ಸಿಂಗ್

ಉತ್ತರ:- ಹ್ಯೊಯೆನ್ ತ್ಸಾಂಗ್

ವಿವರಣೆ:- ಬಾದಾಮಿ ಚಾಲುಕ್ಯರ ರಾಜ್ಯಕ್ಕೆ ಚೀನಾದ ಬೌದ್ಧ
ಯಾತ್ರಿಕ ಹ್ಯೊಯೆನ್ ತ್ಸಾಂಗ್ ಭೇಟಿ ನೀಡಿದ್ದನು. ಇವನು
ತನ್ನ ಸಿ.ಯು.ಕಿ. ಕೃತಿಯಲ್ಲಿ ಪುಲಿಕೇಶಿಯ ಪರಾಕ್ರಮ,
ರಾಜ್ಯನಿಷ್ಟೆಗಳನ್ನು ವರ್ಣಿಸಿ ಹೊಗಳಿದ್ದಾನೆ.


9) 1905 ರಲ್ಲಿ ಬಂಗಾಳವನ್ನು ವಿಭಜನೆ ಮಾಡಿದವರು

1) ಲಾರ್ಡ್ ರಿಪ್ಪನ್
2) ಲಾರ್ಡ್ ಕೇನಿಂಗ್
3)ಲಾರ್ಟ್ ಬೆಂಟಿಂಗ್
4) ಲಾರ್ಡ್  ಕರ್ಝನ್
 
ಉತ್ತರ:- ಲಾರ್ಡ್ ಕರ್ಝನ್
 
ವಿವರಣೆ:- ಅಕ್ಟೋಬರ್ 16,1905ರಂದು ಲಾರ್ಡ್ ಕರ್ಝನ್  ಡಳಿತದ ಅನುಕೂಲಕ್ಕಾಗಿ ಬಂಗಾಳವನ್ನು ಪೂರ್ವ ಬಂಗಾಳ ಮತ್ತು ಪಶ್ಚಿಮ ಬಂಗಾಳ ಗಳಾಗಿ ವಿಭಜಿಸಿದನು.



10) ಭಾರತ ಸಂವಿಧಾನ ಜಾರಿಗೆ ಬಂದ ದಿನ

1) 26 ನೇ ಜನವರಿ 1950
2) 15 ನೇ ಆಗಸ್ಟ್ 1947
3) 26 ನೇ ನವಂಬರ್ 1949
4) 26 ನೇ ಜನವರಿ 1930

ಉತ್ತರ:- 26 ನೇ ಜನವರಿ 1950

ವಿವರಣೆ:- 1929ರ ಲಾಹೋರ್ ಕಾಂಗ್ರೆಸ್ ಅಧಿವೇಶನ
ಸಂದರ್ಭದಲ್ಲಿ ನೆಹರೂ ರವರು ಅಧ್ಯಕ್ಷತೆ ವಹಿಸಿದ್ದರು.
1930 ಜನವರಿ 26 ರಂದು ಪೂರ್ಣ ಸ್ವರಾಜ್ ಘೋಷಣೆ ಮಾಡಲಾಯಿತು. ಆದ್ದರಿಂದ ನವೆಂಬರ್ 26, 1949 ರಂದೇ ಸಂವಿಧಾನ ಅಂಗೀಕರಿಸಿದರೂ ಸಹ ಪೂರ್ಣ ಸ್ವರಾಜ್ ಸವಿನೆನಪಿಗಾಗಿ ಜನವರಿ 26,ರಂದು ಸಂವಿಧಾನ ಜಾರಿಗೆ ತರಲಾಯಿತು.

Also Read/ಇವುಗಳನ್ನು ಓದಿ,ಓದಲು ಲಿಂಕ್ ಮೇಲೆ ಕ್ಲಿಕ್ಕಿಸಿ👇👌

💥 09-11-2021 Daily Top 10 GK Question Answers With Explanations,Useful For All KPSC Exams


💥 10-11-2021 Daily Top 10 GK Question Answers With Explanations,Useful For All KPSC Exams


💥11-11-2021 Daily Top 10 GK Question Answers With Explanations,Useful For All KPSC Exams


💥12-11-2021 Daily Top 10 GK Question Answers With Explanations,Useful For All KPSC Exams


💥 13-11-2021 Daily Top 10 GK Question Answers With Explanations,Useful For All KPSC Exams


💥 14-11-2021 Daily Top 10 GK Question Answers With Explanations,Useful For All KPSC Exams


💥 15-11-2021 Daily Top 10 GK Question Answers With Explanations,Useful For All KPSC Exams


💥 16-11-2021 Daily Top 10 GK Question Answers With Explanations,Useful For All KPSC Exams

🔶️💥🔶️





Post a Comment

0 Comments

Social Science Quizzes For all Competitive Exams Part-125/ಸಮಾಜ ವಿಜ್ಞಾನ ರಸಪ್ರಶ್ನೆಗಳು
[PDF] ಎಸ್.ಎಲ್.ಭೈರಪ್ಪ ಅವರ ಗೃಹಭಂಗ ಕಾದಂಬರಿ PDF
GPSTR Social Science Descriptive Question Answers PDF/ ಸಮಾಜ ವಿಜ್ಞಾನ ವಿವರಣಾತ್ಮಕ ಪ್ರಶ್ನೋತ್ತರಗಳು
KARTET Educational Psychology Quiz Series-01/ಕರ್ನಾಟಕ ಟಿಇಟಿ ಶೈಕ್ಷಣಿಕ ಮನೋವಿಜ್ಞಾನ ಕ್ವಿಜ್ ಸರಣಿ-01
Social Science Quizzes For all Competitive Exams Part-126/ಸಮಾಜ ವಿಜ್ಞಾನ ರಸಪ್ರಶ್ನೆಗಳು
ಆಧುನಿಕ ಭಾರತ ಇತಿಹಾಸ ಸಂಪೂರ್ಣ ಗಾಂಧಿಯುಗ ಮೈಂಡ್ ಮ್ಯಾಪಿಂಗ್ ನೋಟ್ಸ್ ಪಿಡಿಎಫ್/History of Modern India Quick Revision Series PDF
[PDF] ಶೈಕ್ಷಣಿಕ ಮನೋವಿಜ್ಞಾನ ವಾಮದೇವಪ್ಪ ರವರ ಪುಸ್ತಕ ಆಧಾರಿತ ಮನೋವಿಜ್ಞಾನ ಕೈ ಬರಹದ ನೋಟ್ಸ್ PDF
Social Science Quizzes For all Competitive Exams Part-122/ಸಮಾಜ ವಿಜ್ಞಾನ ರಸಪ್ರಶ್ನೆಗಳು
General Kannada, Kannada Literature Quizzes Part-1/ಸಾಮಾನ್ಯ ಕನ್ನಡ, ಕನ್ನಡ ಸಾಹಿತ್ಯ ರಸಪ್ರಶ್ನೆಗಳು
ಆಧುನಿಕ ಭಾರತದ ಇತಿಹಾಸ ಪ್ರಶ್ನೋತ್ತರಗಳು/Modern Indian History Questions and Answers Part-4

Important PDF Notes

Ad Code